LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡ

ಪಣಜಿ, ಆಗಸ್ಟ್  3: ಗೋವಾದಲ್ಲಿ ಪ್ರವಾಸಿಗರಿಂದ ಉಂಟಾಗುವ ಅಸಮರ್ಪಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸಮುದ್ರ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ 19 ವಿಧದ ಚಟುವಟಿಕೆಗಳನ್ನು 'ಸಾರ್ವಜನಿಕ ತೊಂದರೆ' ಎಂದು ಘೋಷಿಸಲಾಗಿದ್ದು, ತಪ್ಪಿತಸ್ಥರಿಗೆ ₹5 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರವಾಸೋದ್ಯಮ ನಿರ್ದೇಶಕ ಕೇದಾರ ನಾಯ್ಕ ಅಧಿಸೂಚನೆ ಹೊರಡಿಸಿದ್ದು, ದೂರು ಬಂದ ನಂತರ ಮಾತ್ರವಲ್ಲದೆ, ನಿಯಮ ಉಲ್ಲಂಘನೆ ಕಂಡುಬಂದ ತಕ್ಷಣವೇ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದೆ.

ಹೊಸ ನಿಯಮಗಳ ಪ್ರಕಾರ ಅನುಮತಿ ಇಲ್ಲದೆ ಸಮುದ್ರ ತೀರದಲ್ಲಿ ಪಾರ್ಟಿ ಅಥವಾ ಕಾರ್ಯಕ್ರಮ ಆಯೋಜಿಸುವುದು, ನೋಂದಣಿಯಾಗದ ಮಾರ್ಗದರ್ಶಕರು, ಮಸಾಜ್ ಮಾಡುವವರು ಅಥವಾ ಬೀದಿ ವ್ಯಾಪಾರಿಗಳ ಸೇವೆ ಪಡೆಯುವುದು, ಅಧಿಕೃತ ಅನುಮತಿ ಇಲ್ಲದ ಕೇಂದ್ರಗಳಿಂದ ಕ್ರೂಸ್ ಅಥವಾ ಜಲಕ್ರೀಡೆ ಟಿಕೆಟ್ ಖರೀದಿಸುವುದು ನಿಷೇಧಿಸಲಾಗಿದೆ.

news_1785765126_0_243.webp

ಇದಲ್ಲದೆ, ನಿಗದಿತ ಪ್ರದೇಶಗಳ ಹೊರತಾಗಿ ಮದ್ಯಪಾನ ಮಾಡುವುದು, ಗಾಜಿನ ಬಾಟಲಿಗಳನ್ನು ಒಡೆದು ಎಸೆಯುವುದು, ಅನುಮತಿಸದ ಸ್ಥಳಗಳಲ್ಲಿ ಅಡುಗೆ ಮಾಡುವುದು, ಕಸ ಎಸೆಯುವುದು, ಅನುಮತಿ ಇಲ್ಲದ ನದಿ ಕ್ರೂಸ್ ಅಥವಾ ಜಲಕ್ರೀಡೆ ನಡೆಸುವುದು, ಸಮುದ್ರ ತೀರದಲ್ಲಿ ವಾಹನ ಚಲಾಯಿಸುವುದು ಹಾಗೂ ತುರ್ತು ಸೇವೆ, ಜೀವರಕ್ಷಕ ಸಿಬ್ಬಂದಿ ಅಥವಾ ಸ್ವಚ್ಛತಾ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವುದೂ ದಂಡನೀಯ ಅಪರಾಧವಾಗಲಿದೆ.

ಸಮುದ್ರ ತೀರ ಅಥವಾ ಅದರ ಸಮೀಪ ತ್ಯಾಜ್ಯ, ಒಳಚರಂಡಿ ನೀರು, ರಾಸಾಯನಿಕ ಅಥವಾ ತೈಲ ತ್ಯಾಜ್ಯ ಸುರಿಯುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ₹5 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದ್ದು, ಅಗತ್ಯವಿದ್ದರೆ ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್ 223ರ ಅಡಿಯಲ್ಲಿ ಕಾನೂನು ಕ್ರಮವನ್ನೂ ಕೈಗೊಳ್ಳಬಹುದಾಗಿದೆ.

news_1785765213_0_173.webp

 

news_1785765181_0_239.webp

 

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ