ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎನ್ ಐಎ ದಾಳಿ : ಕೊಪ್ಪಳ ಜಿಲ್ಲಾ ಪಿಎಫ್ ಐ ಜಿಲ್ಲಾಧ್ಯಕ್ಷ ವಶಕ್ಕೆ 

ಕೊಪ್ಪಳ : ಬೆಂಗಳೂರು, ಮಂಗಳೂರು ಸೇರಿದಂತೆ ಇಡೀ ದೇಶಾದ್ಯಂತ ಎನ್​ಐಎ ಅಧಿಕಾರಿಗಳು ಪಿಎಫ್‌ಐ ಹಾಗೂ ಎಸ್ ಡಿಪಿಐ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿದ್ದು ಕೊಪ್ಪಳದಲ್ಲೂ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲಾ ಪಿಎಫ್ ಐ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇಂದು ಮುಂಜಾನೆ 3 ಗಂಟೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸದಲ್ಲಿ ಅಬ್ದುಲ್ ಫಯಾಜನನ್ನು ವಶಕ್ಕೆ ಪಡೆದ ಎನ್ ಐಎ ಅಧಿಕಾರಿಗಳು ಸದ್ಯ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.