ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹುಬ್ಬಳ್ಳಿ ಮೇಯರ್ ಹೆಸರಿನಲ್ಲಿ ಪೇ-ಮೇಯರ್ ಅಭಿಯಾನ 

ಹುಬ್ಬಳ್ಳಿ: ಬಿಜೆಪಿ ಸರ್ಕಾರದ ವಿರುದ್ಧ 40 % ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್‌ ಪೇ ಸಿಎಂ ಎಂಬ ಹೆಸರಿನ ಪೋಸ್ಟರ್ ಭಾರೀ ವೈರಲ್ ಆಗಿತ್ತು.

ಈಗ ಹುಬ್ಬಳ್ಳಿಯಲ್ಲಿ ಪೇ - ಮೇಯರ್ ಅಭಿಯಾನ ಶುರುವಾಗಿದ್ದು, ಪೇ - ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ವಿರುದ್ಧ ಕಾಂಗ್ರೆಸ್‌ ನಾಯಕರು ಪೇ ಮೇಯರ್‌ ಎಂಬ ಅಭಿಯಾನ ಶುರು ಮಾಡಿದ್ದಾರೆ.

ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಪೆಂಡಾಲ್ ಹಾಕಿದ ನಂತರ ನೀವು ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ರಾಜೀನಾಮೆ ಕೊಡಿ ಎಂದು ಹೇಳಲಾಗುತ್ತಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.