LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಭಾರತೀಯ ನಾವಿಕರ ಹತ್ಯೆಯ ಕಾವಿನ ನಡುವೆ ಫ್ರಾನ್ಸ, ಸ್ಲೋವೇಕಿಯಾ ದೇಶಗಳ ೧ ವಾರದ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಜೂನ್ 13 : ಪ್ರಧಾನಿ ನರೇಂದ್ರ ಮೋದಿ ಶನಿವಾರ ಒಂದು ವಾರದ ಫ್ರಾನ್ಸ್ ಮತ್ತು ಸ್ಲೋವೇಕಿಯಾ ಪ್ರವಾಸಕ್ಕೆ ತೆರಳಿದ್ದು, ಜಿ7 ಶೃಂಗಸಭೆ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ವಿವಿಧ ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪ್ರಧಾನಿ ಮೋದಿ, ಭಾರತದ ವ್ಯೂಹಾತ್ಮಕ ದೃಷ್ಟಿಕೋನದಲ್ಲಿ ಫ್ರಾನ್ಸ್‌ಗೆ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ. 1993ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿದ ಬಳಿಕ ಸ್ಲೋವೇಕಿಯಾಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಪ್ರವಾಸದ ಮೊದಲ ಹಂತದಲ್ಲಿ ಜೂನ್ 14ರಂದು ಫ್ರಾನ್ಸ್‌ನ ನೈಸ್ ನಗರಕ್ಕೆ ಭೇಟಿ ನೀಡಲಿರುವ ಮೋದಿ, ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಜೂನ್ 14 ಮತ್ತು 15ರಂದು ಸ್ಲೋವೇಕಿಯಾ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಈ ನಡುವೆ, ಒಮಾನ್ ಸಮೀಪ ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನಡೆಸಿದೆ ಎನ್ನಲಾದ ದಾಳಿಗಳ ಕುರಿತು ದೇಶದಾದ್ಯಂತ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳಿರುವುದು ಗಮನ ಸೆಳೆದಿದೆ. ಭಾರತೀಯ ನಾವಿಕರ ಸುರಕ್ಷತೆ ಹಾಗೂ ಹಡಗುಗಳ ಮೇಲಿನ ದಾಳಿಯ ಕುರಿತು ಪ್ರಧಾನಿ ಮೋದಿ ಇದುವರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಯಾವುದೇ ಕಠಿಣ ಅಥವಾ ಸ್ಪಷ್ಟ ಸಾರ್ವಜನಿಕ ಹೇಳಿಕೆ ನೀಡಿಲ್ಲ ಎಂಬ ಟೀಕೆಗಳು ಕೆಲವು ವಲಯಗಳಿಂದ ಕೇಳಿಬರುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವು ಏನು ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ಆದರೆ ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಫ್ರಾನ್ಸ್ ಮತ್ತು ಸ್ಲೋವೇಕಿಯಾ ಪ್ರವಾಸದ ಕಾರ್ಯಕ್ರಮಗಳು, ಜಿ7 ಶೃಂಗಸಭೆ, ದ್ವಿಪಕ್ಷೀಯ ಸಂಬಂಧಗಳು ಹಾಗೂ ಆರ್ಥಿಕ-ಸಾಂಸ್ಕೃತಿಕ ಸಹಕಾರಕ್ಕೆ ಆದ್ಯತೆ ನೀಡಲಾಗಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಈ ಭೇಟಿಯ ಪ್ರಮುಖ ಅಂಶವಾಗಿದೆ ಎಂದು ತಿಳಿಸಲಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಅವಧಿಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆಮಹಿಳಾ ಸಂಘದ ಹೆಸರಲ್ಲಿ ₹43.40 ಲಕ್ಷ ವಂಚನೆ: ಇಬ್ಬರು ಮಹಿಳೆಯರ ಬಂಧನಕಡಲೆಕಾಯಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕನ ಸಾವುಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!10ನೇ ತರಗತಿಗೆ ಮೂರನೇ ಭಾಷೆ ಕಡ್ಡಾಯ; 2027–28ರಿಂದ ಸಿಬಿಎಸ್‌ಇ ಹೊಸ ನಿಯಮಬಿಜೆಪಿ ಸ್ವಾರ್ಥಕ್ಕೆ ಬಡವರ ಮಕ್ಕಳು ಬಲಿ: ಖರ್ಗೆಗೋಕಾಕ ಜಲಪಾತ ಸೇರಿ ರಾಜ್ಯದ 13 ಕಡೆ ರೋಪ್‌ ವೇ ಯೋಜನೆಗೆ ವೇಗರೋಟರಾಕ್ಟ್ ಕ್ಲಬ್ ಆಫ್ ಬೆಲಗಾಮ್ ಸೌಥಗೆ ನೂತನ ಪದಾಧಿಕಾರಿಗಳ ಪದಗ್ರಹಣ; ಅಧ್ಯಕ್ಷೆಯಾಗಿ ಮೋನಿಕಾ ಶಿಂಧೆ ಅಧಿಕಾರ ಸ್ವೀಕಾರಎಸ್‌ ಜಾನಕಿ ನಿಧನಕ್ಕೆ ಗಣ್ಯರ ಕಂಬನಿ