ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭೂಮಿ ಹಕ್ಕು ಪತ್ರ ಸಿಗದ ಕಾರಣ ಭೂಮಿಯಲ್ಲಿ ಹೂತು ಪ್ರತಿಭಟನೆ

ಜಾಲ್ನಾ (ಮಹಾರಾಷ್ಟ್ರ) : ಕಲ್ಯಾಣ ಯೋಜನೆಯಡಿ ಮಂಜೂರು ಮಾಡಿದ ಭೂಮಿಯ ಹಕ್ಕು ಪತ್ರ ನೀಡದಿರುವುದನ್ನು ವಿರೋಧಿಸಿ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ರೈತ ಸುನೀಲ ಜಾಧವ ಎಂಬವರು ಮಣ್ಣಿನಲ್ಲಿ ಹೂತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

"ಸುನೀಲ ಜಾಧವ ಅವರಿಗೆ 2019ರಲ್ಲಿ ಕರ್ಮವೀರ ದಾದಾಸಾಹೇಬ ಗಾಯಕ್ವಾಡ ಸಬಲೀಕರಣ ಸ್ವಾಭಿಮಾನ ಯೋಜನೆಯಡಿ ಎರಡು ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಇದುವರೆಗೂ ಅದರ ಕಾಗದ ಪತ್ರ ನೀಡದೇ ಅಧಿಕಾರಿಗಳು ನಿತ್ಯ ಅಲೆದಾಡಿಸುತ್ತಿದ್ದಾರೆ. ಹೀಗಾಗಿ ಬೇಸತ್ತು ನನ್ನನ್ನು ನಾನೇ ಸಮಾಧಿ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಭಿನ್ನ ರೀತಿಯಲ್ಲಿ ಅಧಿಕಾರಿಗಳ ನಡೆ ಖಂಡಿಸಿ ಹಾಗೂ ತನ್ನ ಬೇಡಿಕೆ ಈಡೇರಿಕೆಗಾಗಿ ಮಣ್ಣಿನಲ್ಲಿ ಅರ್ಧ ಸಮಾಧಿ ಮಾಡಿರುವ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತನ ಪಕ್ಕದಲ್ಲಿಯೇ ಮಹಿಳೆಯೊಬ್ಬರು ಮತ್ತು ಮಗುವಿನೊಂದಿಗೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಅಲ್ಲದೇ ಈ ಕುರಿತ ವಿಡಿಯೋವನ್ನು ಸಿರಾಜ ನೂರಾನಿ ಎಂಬುವವರು ಟ್ವೀಟ್‌ ಮಾಡಿ, ಜಾಲ್ನಾದಲ್ಲಿ ತಾಯಿ ಮತ್ತು ಚಿಕ್ಕಮ್ಮನಿಗೆ ಜಮೀನು ಕೊಡಿಸಲು ರೈತರೊಬ್ಬರು ನೆಲದಲ್ಲಿ ಸಮಾಧಿಯಾಗಿದ್ದಾರೆ ಎಂದು ಬರೆದಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.