ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಂತ್ರಿ ಆಗುವವರಲ್ಲಿ ರಮೇಶ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿ

ಧಾರವಾಡ: ಮಾಜಿ ಸಚಿವ ರಮೇಶ‌ ಜಾರಕಿಹೊಳಿ ಜೆಡಿಎಸ್‌ ಗೆ ಹೋಗುವುದಿಲ್ಲ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರು ಮಂತ್ರಿ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ‌ ಯತ್ನಾಳ‌ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಮೇಶ‌ ಜಾರಕಿಹೊಳಿ ಅವರು ಪಕ್ಷ ತೊರೆದು ಹೋಗುವುದಿಲ್ಲ. ಆ ವಿಶ್ವಾಸ ನನಗಿದೆ. ಆದೆಷ್ಟು ಬೇಗ ಅವರು ಸಚಿವರಾಗುತ್ತಾರೆ ಎಂದರು.

ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆಗಲಿದ್ದು, ಅದರಲ್ಲಿ ರಮೇಶ‌ ಜಾರಕಿಹೊಳಿ ಅವರು ಸಚಿವ ಆಗೇ ಆಗ್ತಾರೆ. ನಾನು ಸಚಿವ ಹುದ್ದೆಯ ಆಕಾಂಕ್ಷಿ ಅಲ್ಲ. ಮುಂದೆ ಮಂತ್ರಿ ಮಾಡುವಾಗ ಜಾರಕಿಹೊಳಿ ಹೆಸರೇ ಮೊದಲು ಇರಲಿದೆ ಎಂದು ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.