LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಇದ್ದಕ್ಕಿದ್ದಂತೆ ಹೃದಯಾಘಾತದ ಪ್ರಕರಣ ಹೆಚ್ಚಳ; ಬಸ್‌ ಚಾಲಕನಿಗೆ ಹೃದಯಾಘಾತವಾಗಿ ವಾಹನ ಮೇಲೆ ಎಗರಿದ ಬಸ್‌ ನ ಭಯಾನಕ ವಿಡಿಯೋ

ಜಬಲ್ಪುರ: ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದೃಷ್ಟ ಕೆಟ್ಟಿದ್ದರೆ ಸುಮ್ಮನೆ ಹೋಗುವಾಗಲೂ ಸಾವು ಬರಬಹುದು. ಅದೇ ರೀತಿ ಹೃದಯಾಘಾತವಂತೂ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಇಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ವೈರಲ್​ ಆಗಿದೆ.



ಬಸ್ ಚಲಾಯಿಸುತ್ತಿರುವಾಗಲೇ ಚಾಲಕನೊಬ್ಬನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದಿದ್ದು ಇದರ ಭಯಾನಕ ವಿಡಿಯೋ ವೈರಲ್​ ಆಗಿದೆ. ಈತ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿದ್ದರಿಂದ ಬಸ್ಸು ನಿಯಂತ್ರಣ ತಪ್ಪಿ ಸಿಗ್ನಲ್‌ ನಲ್ಲಿ ನಿಂತ ಬೈಕ್​ಗಳ ಮೇಲೆಯೇ ಏರಿ ಹೋದ  ಭಯಾನಕ ಘಟನೆ ನಡೆಯಿತು.



ಬಸ್‌ ಚಕ್ರದಡಿ ಇಬ್ಬರು ಅಮಾಯಕ ವ್ಯಕ್ತಿಗಳು ಸಿಲುಕಿ ಸಾವನ್ನಪ್ಪಿದ್ದಾರೆ. ಬಸ್​ ಅಡ್ಡಾದಿಡ್ಡಿ ಚಲಿಸಿ ಕಂಡ ಕಂಡ ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ. ಸಿಟಿ ಬಸ್ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.



ಸರ್ಕಲ್​ನಲ್ಲಿ ರೆಡ್ ಸಿಗ್ನಲ್​ ಬಿದ್ದಾಗ ವಾಹನ ಸವಾರರು ನಿಂತಿದ್ದರು. ಅವರ ಮೇಲೆ ಬಸ್​ ಹಾದು ಹೋಗಿದೆ. ಈ ಘಟನೆಯ ನಂತರ ಟ್ವಿಟರ್​ನಲ್ಲಿ ಹ್ಯಾಷ್​ಟ್ಯಾಗ್​ ಜತೆಗೆ ಹಾರ್ಟ್​ಆಟ್ಯಾಕ್​ ಕುರಿತು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.



https://twitter.com/i/status/1599076554189201408



https://twitter.com/the_mpr/status/1599389355394891784?ref_src=twsrc%5Etfw%7Ctwcamp%5Etweetembed%7Ctwterm%5E1599389355394891784%7Ctwgr%5E022160cd48cf343ad907d16051459f13e6915afe%7Ctwcon%5Es1_c10&ref_url=https%3A%2F%2Fkannadadunia.com%2Flive-news%2Fheartattack-trends-on-twitter-as-netizens-express-worry-over-increasing-cases-of-heart-attack-share-scaryvideos-of-people-dying-of-heart-attack-on-camera%2F



https://twitter.com/i/status/1599355493646209024

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಪ್ರತಿಭಟನೆಗೆ ತೆರಳದಂತೆ ಮಹಾರಾಷ್ಟ್ರ ಪೊಲೀಸರ ನೋಟಿಸ್ಸ್ಟಿಂಗ್‌ ಕುತಂತ್ರ: ಮುಂದಿನ ವಾರ ದಾಖಲೆ ಬಿಡುಗಡೆಸಂಕೇಶ್ವರ ಬಳಿ ಅಪಘಾತ: ಟಿಪ್ಪರ್‌ಗೆ ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯಅಂಗನವಾಡಿ ನೇಮಕಾತಿಯಲ್ಲಿ ಹಣ ವಸೂಲಿ ಆರೋಪ: ಹುಕ್ಕೇರಿ ಸಿಡಿಪಿಒಗೆ ನೋಟಿಸ್ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ಸಾಧ್ಯತೆನವಲಗುಂದ ಬಳಿ ಭೀಕರ ಅಪಘಾತ: ಕಾರು–ಕ್ಯಾಂಟರ್ ಡಿಕ್ಕಿಗೆ ನಾಲ್ವರ ಬಲಿಸಿಜೆಪಿ ಪ್ರತಿಭಟನೆಗೆ ದೆಹಲಿ ಸ್ತಬ್ಧ: ಎಲ್ಲೆಡೆ ನಿರ್ಬಂಧಪ್ರತಿಭಟನೆಗೆ ಪರ್ಯಾಯ ಸ್ಥಳ ಗುರುತಿಸಿ: ಸುಪ್ರೀಂ ಕೋರ್ಟಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ: ದೆಹಲಿ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ನೋಟಿಸ್‘ಸಂವಿಧಾನ ಉಳಿಸಲು ಬೀದಿಗಿಳಿಯಿರಿ’: ದೇಶದ ಜನತೆಗೆ ತುಷಾರ್ ಗಾಂಧಿ ಕರೆ