ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಟಾಟಾ ಪಾಲಾದ ಬಿಸ್ಲೇರಿ ನೀರು

ಹೊಸದಿಲ್ಲಿ : ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು ಟಾಟಾ ಸಮೂಹ ಖರೀದಿಸಿದೆ. ಒಟ್ಟು 7,000 ಕೋಟಿ ರೂಪಾಯಿಗೆ ಈ ಡೀಲ್‌ ನಡೆದಿದೆ. ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ.

ಟಾಟಾ ಸಮೂಹವು ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ‌ ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ.
ಟಾಟಾ ಸಮೂಹವು ಬಿಸ್ಲೇರಿಯನ್ನು ಖರೀದಿಸುವುದರೊಂದಿಗೆ, ಅದಕ್ಕೆ ದಿನ ಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ದೊಡ್ಡ ಮುನ್ನಡೆ ಲಭಿಸಿದೆ.

ಭಾರತದಲ್ಲಿ ಬಾಟಲಿಗಳಲ್ಲಿನ ಕುಡಿಯುವ ನೀರಿನ ಮಾರಾಟ ವಹಿವಾಟು ವಾರ್ಷಿಕ 19,315 ಕೋಟಿ ರೂ.ಗಳಾಗಿವೆ. ಸದ್ಯಕ್ಕೆ ಮಾರುಕಟ್ಟೆ ಪ್ರಾಬಲ್ಯವನ್ನು ಬಿಸ್ಲೇರಿ ಹೊಂದಿದೆ.

ಬಿಸ್ಲೇರಿ ಇಂಟರ‌ನ್ಯಾಶನಲ್‌ ಭಾರತದ ಅತಿ ದೊಡ್ಡ ಬಾಟಲಿ ಕುಡಿಯುವ ನೀರಿನ ಉತ್ಪಾದಕ ಕಂಪನಿಯಾಗಿದ್ದು, 150 ಉತ್ಪಾದನಾ ಘಟಕಗಳನ್ನು 4,000 ಟ್ರಕ್‌ಗಳ ನೆಟ‌ವರ್ಕ‌ ಹೊಂದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.