ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ ; ಉಗ್ರ ಕೃತ್ಯ ಎಂದ ಮುಖ್ಯಮಂತ್ರಿ

ಬಳ್ಳಾರಿ : ಮಂಗಳೂರಿನ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇದೊಂದು ಉಗ್ರ ಕೃತ್ಯ ಎಂದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಆಟೋ ನಿಗೂಢ ಸ್ಪೋಟ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಶಂಕಿತರ ಗುರುತು ಪತ್ತೆ ಹೆಚ್ಚಿದ್ದಾರೆ. ಇದೊಂದು ಉಗ್ರ ಕೃತ್ಯ ಎಂದು ಗೊತ್ತಾಗಿದೆ. ಶಂಕಿತನಿಗೆ ಭಯೋತ್ಪಾದಕರ ಸಂಪರ್ಕ ಇರುವ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಇನ್ನು ನಿನ್ನೆ ಸಂಜೆ ಮಂಗಳೂರಿನ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ವಸ್ತುವೊಂದು ಸ್ಪೋಟಗೊಂಡು ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಸದ್ಯ ಸ್ಪೋಟಕ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಟೋದಲ್ಲಿ ಎರಡು ಬ್ಯಾಟರಿ ಪತ್ತೆ ಹಚ್ಚಿದ್ದಾರೆ.

ಲಘು ತೀವ್ರ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದ್ದು, ವಸ್ತುಗಳನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ ತಂಡಕ್ಕೆ ಕಳುಹಿಸಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.