LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಹೆಂಡತಿಯ ಕೊಂದು ಮನೆ ಬಳಿಯೇ ಹೂತು ಕಣ್ಮರೆ ಅಂತ ದೂರು ಕೊಟ್ಟ ಪತಿ

ವಿಜಯಪುರ : ಪತ್ನಿಯನ್ನು ತಾನೇ ಕೊಂದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸರು ಬಂಧಿಸಿದ್ದಾರೆ.

ಕೊಲೆ ನಡೆದು 24 ದಿನಗಳ ಬಳಿಕ ಆರೋಪಿಯ ಅಸಲಿ ಮುಖ ಅನಾವರಣಗೊಂಡಿದ್ದು, ಸಾಲದ ವಿಚಾರಕ್ಕೆ ಜಗಳ ನಡೆದ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕೊಂದಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ದೇವರಹಿಪ್ಪರಗಿ ನಿವಾಸಿ ಸರೋಜಿನಿ ಪ್ರಭು ರತ್ನಾಕರ (44) ಕೊಲೆಯಾದವಳು. ಈಕೆಯ ಪತಿ, ಪ್ರಭು ರತ್ನಾಕರ (46) ಕೊಲೆ ಆರೋಪಿ. ಆರೋಪಿ ಪ್ರಭು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ವಿವಿಧೆಡೆ ಕೈ ಸಾಲ ಮಾಡಿಕೊಂಡು, ವಿಪರೀತ ಸಾಲ ಮಾಡಿದ್ದ. ಸಾಲಗಾರರಿಗೆ ತನ್ನ ಪತ್ನಿಯ ಹೆಸರಿನಲ್ಲಿ ಚೆಕ್ ನೀಡಿದ್ದ. ಈ ಸಂಬಂಧ ಸರೋಜಿನಿ ವಿರುದ್ಧ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ, ಹಣ ಕಟ್ಟುವಂತೆ ಸರೋಜಿನಿ ಆತನನ್ನು ಒತ್ತಾಯಿಸಿದ್ದಳು. ಈ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇದೇ ವಿಚಾರವಾಗಿ ಜನವರಿ 24ರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ, ಕೋಪದ ಭರದಲ್ಲಿ ಪ್ರಭು ರತ್ನಾಕರ, ಖಾರ ಕುಟ್ಟುವ ಹಾರೆಯಿಂದ ಪತ್ನಿಯ ತಲೆಗೆ ಹೊಡೆದಿದ್ದ. ಆಕೆ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಳು. ಬಳಿಕ, ಮನೆಯ ಆವರಣದಲ್ಲೇ ಗುಂಡಿ ತೋಡಿ, ಶವವನ್ನು ಹೂತು ಹಾಕಿದ್ದ. ಫೆ.2ರಂದು ದೇವರಹಿಪ್ಪರಗಿ ಪೊಲೀಸ್‌ ಠಾಣೆಗೆ ತೆರಳಿ, ಮನೆಗೆ ಸಾಮಾನು ತರಲು ಕಿರಾಣಿ ಅಂಗಡಿಗೆ ಹೋಗಿ ಬರುವೆ ಎಂದು ಹೊರಹೋದ ಪತ್ನಿ ತಿರುಗಿ ಬಂದಿಲ್ಲ. ಆಕೆಗಾಗಿ ಎಲ್ಲಾ ಕಡೆ ಹುಡುಕಾಡಿದ್ದೇನೆ. ಆದರೆ ಆಕೆಯ ಪತ್ತೆಯಾಗಿಲ್ಲ. ನೆಂಟರಿಷ್ಟರ ಮನೆಗಳಿಗೂ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದರೂ ಪತ್ನಿಯ ಸುಳಿವು ಸಿಕ್ಕಿಲ್ಲ ಎಂದು ದೂರು ನೀಡಿದ್ದ. ಪತ್ನಿಯ ತವರು ಮನೆಯವರು, ನೆಂಟರ ಜೊತೆ ಸೇರಿಕೊಂಡು ಆಕೆಯನ್ನು ಹುಡುಕುವ ನಾಟಕವಾಡಿದ್ದ.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಈತನ ಮೇಲೆಯೇ ಸಂಶಯ ಬಂದಿತ್ತು. ತೀವ್ರ ವಿಚಾರಣೆ ಬಳಿಕ ಆತ ಸತ್ಯ ಒಪ್ಪಿಕೊಂಡಿದ್ದು, ತಾನೇ ಕೊ*ಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಕೊ*ಲೆ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹೂತಿದ್ದ ಶವ ಹೊರ ತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ತವರು ಮನೆಯವರಿಗೆ ಶವ ಹಸ್ತಾಂತರಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ