ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪತ್ನಿಯಿಂದ ಲೈಂಗಿಕಾಸಕ್ತಿ ಕಡಿಮೆ ಇದ್ದ ಪತಿಯ ಕೊಲೆ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನ. 6 ರಂದು ವಡೆಯರಹಳ್ಳಿಯಲ್ಲಿ ರಾಕೇಶ ತೋಮಾಂಗ್(52) ಎಂಬುವನ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆತನ ಪತ್ನಿ ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್(46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್ ಅಲಿ ಬಾಬು(28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

30 ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿರುವ ರಾಕೇಶ ಸೆಕ್ಯೂರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ. ದೇವಿ ಮನೆ ಕೆಲಸ ಮಾಡುತ್ತಿದ್ದಳು. ಪತಿಗೆ ಊಟ ಕೊಡಲು ಹೋಗುವಾಗ ಆರೋಪಿ ಜೈನುಲ್ ಪರಿಚಿತನಾಗಿ ಆಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ತಿಳಿದ ರಾಕೇಶ ಪತ್ನಿಗೆ ಬೈದಾಡಿ ಬುದ್ಧಿವಾದ ಹೇಳಿದ್ದ.

ಇತ್ತೀಚೆಗೆ ಒಂದು ವಾರ ಮನೆ ಬಿಟ್ಟು ಹೋಗಿದ್ದ ದೇವಿ ವಾಪಸ್ ಬಂದಿದ್ದು, ಜೈನಲ್ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ರಾಕೇಶ ಬುದ್ಧಿವಾದ ಹೇಳಿದ್ದ. ರಾಕೇಶಗೆ ಮದ್ಯ ಸೇವಿಸುವ ಚಟ. ಲೈಂಗಿಕಾಸಕ್ತಿ  ಕಡಿಮೆ ಇತ್ತು. ಪತ್ನಿ ಮೇಲೆ ಆಗಾಗ ಹಲ್ಲೆ ಮಾಡುತ್ತಿದ್ದ.

ಮದ್ಯವ್ಯಸನಿ ಗಂಡನಿಂದ ಲೈಂಗಿಕ ಸುಖ ಸಿಗದ ಕಾರಣ ದೇವಿ ಜೈನುಲ್ ಜೊತೆಗೆ ಸಂಬಂಧ ಬೆಳೆಸಿದ್ದು, ನೀನು ಗಂಡಸಾಗಿದ್ದಲ್ಲಿ ಗಂಡನನ್ನು ಕೊಲೆ ಮಾಡು. ನಂತರ ನನ್ನ ಜೊತೆ ಮಲಗು ಎಂದು ಹೇಳಿದ್ದಳು. ಇದರಿಂದ ರೊಚ್ಚಿಗೆದ್ದ ಜೈನುಲ್ ಕೊಲೆಗೆ ಸಂಚು ರೂಪಿಸಿದ್ದ. ಅ. 29 ರ ರಾತ್ರಿ ಮನೆಗೆ ಬಂದಿದ್ದ ಜೈನುಲ್ ಸ್ಟೋರ್ ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದು, ನ. 5 ರ ರಾತ್ರಿ ರಾಕೇಶನಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಾರನೇ ದಿನ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟಿದ್ದಾನೆ ಎಂದು ದೇವಿ ನಾಟಕ ಮಾಡಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.