ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೊಲೆಯಾಗಿದ್ದವಳು 7 ವರ್ಷಗಳ ಬಳಿಕ ಪ್ರಿಯಕರನೊಂದಿಗೆ ಪತ್ತೆ; ಕೊಲೆ ಆರೋಪಿ 7 ವರ್ಷಗಳಿಂದ ಜೈಲಿನಲ್ಲಿ

ಲಖನೌ, ೮- 7 ವರ್ಷದ ಹಿಂದೆ ಹುಡುಗಿ ಸತ್ತಿದ್ದಾಳೆ ಎಂದು ಆಕೆಯ ಸಾವಿಗೆ ಕಾರಣನಾಗಿದ್ದಾನೆಂದು 7 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನು ಜೈಲಿಗೆ ನೂಕಲಾಯಿತು. ಆದರೆ ಏಳು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ ಜೀವಂತವಿದ್ದಾಳೆ. ಅವಳ ಕೊಲೆ ಆರೋಪದ ಮೇಲೆ ವ್ಯಕ್ತಿ ಮಾತ್ರ ಜೈಲಲ್ಲಿದ್ದಾನೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.

ವಿಷ್ಣು ಎಂಬಾತನಿಗೆ ನ್ಯಾಯಾಲಯವು ಏಳು ವರ್ಷಗಳ ಹಿಂದೆ ಕೊಲೆ ಆರೋಪದಡಿ ಜೈಲು ಶಿಕ್ಷೆಯನ್ನು ವಿಧಿಸಿತು. ಯುವತಿಯ ತಂದೆ ಆಗ್ರಾದಲ್ಲಿ ಅಪರಿಚಿತ ಶವವನ್ನು ತಮ್ಮ ಮಗಳು ಎಂದು ಗುರುತಿಸಿದ್ದರು. ಅಪ್ರಾಪ್ತೆಯನ್ನು ಅಪಹರಿಸಿ ಕೊಂದ ಎಂಬ ಪ್ರಕರಣದಲ್ಲಿ ವಿಷ್ಣು ಜೈಲು ಪಾಲಾಗಿದ್ದ. ಈ ಮಧ್ಯೆ, ವಿಷ್ಣು ಅವರ ತಾಯಿ ತಮ್ಮ ಮಗನಿಗೆ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಹದಿಹರೆಯದವನಾಗಿದ್ದಾಗ ಮಹಿಳೆಯನ್ನು ಅಪಹರಿಸಿ ಕೊಂದ ಆರೋಪ ಹೊತ್ತಿದ್ದ ಮಗನಿಗೆ ನ್ಯಾಯ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮಹಿಳೆ ಸತ್ತಿಲ್ಲ. ಆಕೆ ಬದುಕಿದ್ದಾಳೆ. ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ , ನನ್ನ ಮಗ ನಿರಪರಾಧಿ ಎಂದಿದ್ದರು.

ವಿಷ್ಣು ತಾಯಿಯ ಅರ್ಜಿಯಂತೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದಾಗ ಪೊಲೀಸರು ಮಹಿಳೆಯನ್ನು ಅಲಿಗಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಕೆಯ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ಮಾಡಿಸಿದರು. ಮಹಿಳೆಯ ತಂದೆ ಆಕೆಯನ್ನು ತನ್ನ ಮಗಳು ಎಂದು ಗುರುತಿಸಿದ್ದಾರೆ.

ಆ ತರುಣಿ ಅಪ್ರಾಪ್ತೆಯಾಗಿದ್ದಾಗ 7 ವರ್ಷದ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿ ಬೇರೆಡೆ ನೆಲೆಸಿದ್ದಳು. ಇದೀಗ ಪೊಲೀಸರ ಸಮಗ್ರ ತನಿಖೆಯಿಂದ ನಿಜ ವಿಚಾರ ಹೊರಗೆ ಬಂದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.