LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಸಾಲ ಪಡೆದುಕೊಳ್ಳಲು ಹೋದ ವ್ಯಕ್ತಿ ದಾಖಲೆ ಪಡೆದು 11 ಲಕ್ಷ ರೂ. ಸಾಲ ಪಡೆದು ಪಂಗನಾಮ

ವಿಜಯಪುರ: ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯ ದಾಖಲೆ ಪಡೆದು ಆತನಿಗೆ ಗೊತ್ತಿಲ್ಲದಂತೆ 11 ಲಕ್ಷ ರೂಪಾಯಿ ಸಾಲ ಪಡೆದು ಮೋಸ ಮಾಡಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.



ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್ನಲ್ಲಿ ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕೃಷ್ಣ ಕಾಳೆ ಎಂಬುವವರು ವಂಚನೆಗೆ ಒಳಗಾಗಿದ್ದಾರೆ.



ಅರವಿಂದ ಅವರ ಹೆಸರಿನ ಖಾತೆಯ ಮೂಲಕ 11 ಲಕ್ಷ ರೂ ಸಾಲ ತೆಗೆದಿದ್ದು, ಬ್ಯಾಂಕ್ನಿಂದ ನೋಟಿಸ್ ಬಂದಾಗಲೇ ವಂಚನೆಯ ಅರಿವಾಗಿದೆ.



ನಗರದ ದಿವಟೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಕಳೆದ ವರ್ಷ 2021 ಫೆಬ್ರವರಿ 15ರಂದು ಅರವಿಂದ ಅವರಿಗೆ ಪರಿಚಯವಾಗಿದ್ದರು.



ಸಾಲ ಕೊಡಿಸುವುದಾಗಿ ಹೇಳಿ ಆಧಾರ್ ಕಾರ್ಡ್, ಫೋಟೊ ಹಾಗೂ ಮನೆ ಉತಾರ್​ಪಡೆದುಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು 2022 ಅಕ್ಟೋಬರ್​ನಲ್ಲಿ ವಿಡಿಸಿಸಿ ಬ್ಯಾಂಕಿನಿಂದ ಮೋಸಕ್ಕೊಳಗಾದ ಅರವಿಂದ ಕಾಳೆಗೆ ಸಾಲ ಕುರಿತು ನೋಟಿಸ್ ಬಂದಿದೆ.

ಆ ನಂತರ ತಾನು ಶಿವಕುಮಾರ ಚಿಕ್ಕೋಡಿ ಎಂಬವನಿಂದ ಮೋಸ ಹೋಗಿರುವುದಾಗಿ ಅರವಿಂದ ಕಾಳೆಗೆ ಅರಿವಿಗೆ ಬಂದಿದೆ. ಸದ್ಯ ಸಾಲ ಪಡೆದ ಮಾಹಿತಿಯನ್ನು ಬ್ಯಾಂಕ್, ಮನೆ ಜಪ್ತಿ ಮಾಡುವುದಾಗಿ ನೋಟಿಸ್​ ನೀಡಿದೆ.

ಖೊಟ್ಟಿ ದಾಖಲೆ ಸೃಷ್ಟಿ ಮಾಡಿ, ನಕಲಿ ಸಹಿ ಮಾಡಿ ವಿಡಿಸಿಸಿ ಬ್ಯಾಂಕ್ ನಿಂದ 11ಲಕ್ಷ ರೂ. ಹಣ ಮೋಸ ಮಾಡಿ ತಲೆಮರೆಸಿಕೊಂಡಿರುವ ಶಿವಕುಮಾರ ಚಿಕ್ಕೋಡಿ ವಿರುದ್ಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗರ ಪಂಚಮಿ ದಿನವೇ ಹಾವು ಕಡಿತಕ್ಕೆ ಮಹಿಳೆ ಬಲಿಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆ