ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಾಲಕಿ ನಂಬಿಸಿ ನಿರಂತರ ಅತ್ಯಾಚಾರ; ಜನಿಸಿದ ಮಗುವನ್ನು ಮರಕ್ಕೆ ನೇತು ಹಾಕಿದ ಘಟನೆ ಭೇದಿಸಿದ ಪೊಲೀಸರು  

ಬೆಳಗಾವಿ: ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಮಗು ಹೆರಲು ಕಾರಣವಾದ ಯುವಕನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

ಖಾನಾಪುರ ತಾಲ್ಲೂಕಿನ ಗೌಳಿವಾಡ ಗ್ರಾಮದ ಮಲ್ಲು ಅಪ್ಪು ಪಿಂಗಳೆ (19) ಬಂಧಿತ ಆರೋಪಿ. ಅದೇ ತಾಲ್ಲೂಕಿನ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಕೆಲ ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ಮೇಲೆ ಪೋಕ್ಸೊ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌಳಿವಾಡದ ಮಲ್ಲು ಹಾಗೂ ಖಾನಾಪುರ ಹಳ್ಳಿಯೊಂದರ ಶಾಲಾ ಬಾಲಕಿ ಮಧ್ಯೆ ಪ್ರೇಮ ಉಂಟಾಗಿತ್ತು. ಹಲವು ತಿಂಗಳಿಂದ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು. ಬಾಲಕಿ ಗರ್ಭಿಣಿ ಆಗಿದ್ದು. ಆಗಸ್ಟ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಅಗಸ್ಟ‌ 25ರಂದು ಗೌಳಿವಾಡ ಗ್ರಾಮ ಹೊರವಲಯದ ಮರಕ್ಕೆ ನೇತು ಹಾಕಿದ ಪ್ಲಾಸ್ಟಿಕ್‌ ಚೀಲದಲ್ಲಿ ಹಸುಳೆಯೊಂದು ಪತ್ತೆಯಾಗಿತ್ತು. ಗ್ರಾಮದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎನ್ನುವವರು ಮಗು ಅಳುವ ಶಬ್ದ ಕೇಳಿ ಅದನ್ನು ರಕ್ಷಿಸಿದ್ದರು.

ಆಂಬುಲೆನ್ಸ್‌ ಮೂಲಕ ಹಸುಳೆಯನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಹಸುಳೆಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಪ್ರಕರಣ ಭೇದಿಸಿದ ಖಾನಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ಆಗ 16 ವರ್ಷದ ಬಾಲಕಿಯ ಜೊತೆಗೆ ಬೆಳೆಸಿದ ಸಂಬಂಧದ ಕಾರಣ ಮಗು ಜನಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.