ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೇಗ ಶಾಲೆ ತಲುಪಲು ಚಾಲಕನ ಗಡಿಬಿಡಿ : ಹೋಟೆಲಗೆ ನುಗ್ಗಿದ ಶಾಲಾ ಬಸ್

ಬೆಂಗಳೂರು : ಶಾಲೆ ತಲುಪಲು ಗಡಿಬಿಡಿ ಮಾಡುತ್ತ ವೇಗವಾಗಿ ಶಾಲಾ ವಾಹನ ಓಡಿಸುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ನಡೆದಿದೆ.

ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ನ್ಯೂ ಆಕ್ಸಫರ್ಡ ಪಬ್ಲಿಕ್ ಸ್ಕೂಲ್ ಬಸ್ ಬೆಂಗಳೂರಿನ ಮಾದನಾಯಕನಹಳ್ಳಿ ಲಕ್ಷ್ಮೀ ಪುರದಲ್ಲಿ ಐಷರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಹೋಟೆಲಗೆ ನುಗ್ಗಿದೆ.

ಬಸ್ ನುಜ್ಜು ಗುಜ್ಜಾಗಿದೆ. ಬಸ್ ನಲ್ಲಿದ್ದ ಹಲವು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಬೇಜವಾಬ್ದಾರಿಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಸ್ ಚಾಲಕ ನಾರಾಯಣನನ್ನು ವಶಕ್ಕೆ ಪಡೆದಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.