LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

18 ಸಾವಿರ ಅಗ್ನಿವೀರರ ಸೇವಾವಧಿ 2 ವರ್ಷ ವಿಸ್ತರಣೆ

ಹೊಸದಿಲ್ಲಿ, ನ. 4: ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಸೇವಾವಧಿಯನ್ನು ನಾಲ್ಕರಿಂದ ಆರು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರಿಂದ ಮೊದಲ ಹಂತದಲ್ಲಿ ಸೇವೆಗೆ ಸೇರಿದ್ದ ಸುಮಾರು 18 ಸಾವಿರ ಅಗ್ನಿವೀರರಿಗೆ ಅನುಕೂಲವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ತಿಳಿಸಿದ್ದಾರೆ ಎನ್ನಲಾಗಿದೆ.

ಪರಿಷ್ಕೃತ ಯೋಜನೆಯ ಪ್ರಕಾರ, ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸುವ ಅಗ್ನಿವೀರರಲ್ಲಿ ಶೇ.25ರಷ್ಟು ಮಂದಿಯನ್ನು ಅರ್ಹತೆ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿ ನಿಯಮಿತ ಸೇನಾ ಸೇವೆಗೆ ಆಯ್ಕೆ ಮಾಡಲಾಗುವುದು. ಉಳಿದ ಶೇ.75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಕಾಶ ನೀಡಲಾಗುತ್ತದೆ.

ಹೆಚ್ಚುವರಿ ಸೇವಾವಧಿಯಲ್ಲಿ ಅಗ್ನಿವೀರರಿಗೆ ಪರಿಷ್ಕೃತ ವೇತನ ಮತ್ತು ಭತ್ಯೆಗಳು ದೊರೆಯಲಿವೆ. ಆರು ವರ್ಷಗಳ ಸೇವೆ ಪೂರ್ಣಗೊಂಡ ಬಳಿಕ ಆಸಕ್ತ ಅಭ್ಯರ್ಥಿಗಳನ್ನು ನಿಗದಿತ ಆಯ್ಕೆ ಪ್ರಕ್ರಿಯೆ ಹಾಗೂ ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದಲ್ಲಿ ಶಾಶ್ವತ ಸೇವೆಗೆ ಪರಿಗಣಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೊದಲ ತಂಡಕ್ಕೆ ಅನುಕೂಲ

2022ರ ಜೂನ್ 14ರಂದು ಕೇಂದ್ರ ಸರಕಾರ ಅಗ್ನಿಪಥ ಯೋಜನೆ ಜಾರಿಗೊಳಿಸಿತ್ತು. ಇದರಡಿ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ಪೈಕಿ ಶೇ.25ರಷ್ಟು ಮಂದಿಗೆ ಮಾತ್ರ ನಿಯಮಿತ ಸೇವೆಯಲ್ಲಿ ಮುಂದುವರಿಯಲು ಅವಕಾಶವಿತ್ತು.

ಮೊದಲ ತಂಡದ ಸುಮಾರು 18 ಸಾವಿರ ಅಗ್ನಿವೀರರು ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಳಿಸುವ ಹಂತದಲ್ಲಿರುವಾಗ ಈ ನಿರ್ಧಾರ ಪ್ರಕಟವಾಗಿದೆ ಎನ್ನಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಅಗ್ನಿವೀರರ ಕಾರ್ಯಕ್ಷಮತೆ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಬದಲಾವಣೆಯಿಂದ ಸೇನೆಯಲ್ಲಿ ತರಬೇತಿ ಪಡೆದ ಯುವಕರ ಸೇವೆಯನ್ನು ಮತ್ತಷ್ಟು ಕಾಲ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST