LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಕಾರು ತಡೆದ ಪೊಲೀಸ್​ನನ್ನೇ ಬಾನೆಟ್​ ಮೇಲೆ 4 ಕಿ.ಮೀ. ಎಳೆದೊಯ್ದ ಚಾಲಕ: ವಿಡಿಯೋ ವೈರಲ್

ಇಂದೋರ, ೧೪- ಟ್ರಾಫಿಕ್ ಉಲ್ಲಂಘನೆಯ ದಂಡವನ್ನು ತಪ್ಪಿಸುವ ಸಲುವಾಗಿ ವಾಹನ ಚಾಲಕನೊಬ್ಬ ಪೊಲೀಸರ ಮೇಲೆ ಗಾಡಿ ಓಡಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ‌ನಲ್ಲಿ ನಡೆದಿದೆ.



ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸ್ ಬಾನೆಟ್‌ಗೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.



ಸಂಚಾರ ನಿಯಮ ಉಲ್ಲಂಘನೆಗಾಗಿ ಟ್ರಾಫಿಕ್ ಪೊಲೀಸರು ಕಾರನ್ನು ನಿಲ್ಲಿಸಿದ್ದರು. ಆದರೆ ಕಾರಿನ ಚಾಲಕ ಪೊಲೀಸರನ್ನು ಓಡಿಸಲು ಯತ್ನಿಸಿದ್ದಾನೆ. ಪೊಲೀಸ್​ ಮೇಲೆ ಕಾರು ಹರಿಸಿದಾಗ ಕಾರಿನ ಬಾನೆಟ್​ ಮೇಲೆ ಪೊಲೀಸ್​ ನೇತಾಡುತ್ತಿದ್ದು, ಸುಮಾರು 4 ಕಿಲೋಮೀಟರ್ ದೂರ ಹೋಗಿರುವ ಘಟನೆ ನಡೆದಿದೆ. ನಂತರ, ಪೊಲೀಸರು ಕಾರು ಚಾಲಕನಿಂದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.



ಬಿಳಿ ಬಣ್ಣದ ಕಾರು ಪೊಲೀಸರನ್ನು ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.



“ಫೋನ್‌ನಲ್ಲಿ ಮಾತನಾಡುತ್ತಾ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನಾನು ನಿಲ್ಲಿಸಿದೆ. ನಾನು ಚಲನ್ ಪಾವತಿಸುವಂತೆ ಕೇಳಿದೆ. ಆದರೆ ಅವನು ಪಾವತಿಸಲು ನಿರಾಕರಿಸಿದನು ಮತ್ತು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು” ಎಂದು ಟ್ರಾಫಿಕ್ ಪೊಲೀಸ್ ಶಿವಸಿಂಗ್ ಚೌಹಾಣ ಹೇಳಿದ್ದಾರೆ. ಆರೋಪಿಯನ್ನು ಗ್ವಾಲಿಯರ್ ನಗರದ ನಿವಾಸಿ ಕೇಶವ ಉಪಾಧ್ಯಾಯ ಎಂದು ಗುರುತಿಸಲಾಗಿದೆ.



https://twitter.com/i/status/1602259914092445696

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗರ ಪಂಚಮಿ ದಿನವೇ ಹಾವು ಕಡಿತಕ್ಕೆ ಮಹಿಳೆ ಬಲಿಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆ