LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿಯಲ್ಲಿ ವರುಣನ ಆರ್ಭಟ: 8 ಸೇತುವೆಗಳು ಜಲಾವೃತ, ನದಿಗಳಲ್ಲಿ ನೀರಿನ ಹರಿವು ಭಾರಿ ಏರಿಕೆ

ಬೆಳಗಾವಿ, ಜುಲೈ 6: ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಘಟಪ್ರಭಾ, ಮಲಪ್ರಭಾ ಸೇರಿದಂತೆ ಸಪ್ತ ನದಿಗಳು ಮೈದುಂಬಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಮತ್ತೊಂದು ಸೇತುವೆ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಜಲಾವೃತಗೊಂಡ ಸೇತುವೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಭಾನುವಾರದಿಂದಲೇ ನೀರಿನಲ್ಲಿ ಮುಳುಗಿದ್ದ ಏಳು ಸೇತುವೆಗಳು ಸೋಮವಾರವೂ ಜಲಾವೃತವಾಗಿಯೇ ಉಳಿದಿವೆ. ಇದರೊಂದಿಗೆ ಗೋಕಾಕ–ಶಿಂಗಾಳಾಪುರ ಸಂಪರ್ಕ ಸೇತುವೆಯೂ ನೀರಿನಲ್ಲಿ ಮುಳುಗಿದ್ದು, ಹಲವು ಗ್ರಾಮಗಳ ನಡುವಿನ ರಸ್ತೆ ಸಂಪರ್ಕಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಮುಳುಗಡೆಯಾದ ಸೇತುವೆಗಳ ಬಳಿ ಬ್ಯಾರಿಕೇಡ್ ಅಳವಡಿಸಿ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ನಿರಂತರ ಮಳೆಯ ಪರಿಣಾಮ ಹಿಡಕಲ್ ಜಲಾಶಯ ಹಾಗೂ ನವಿಲುತೀರ್ಥ ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣದಲ್ಲೂ ಭಾರೀ ಏರಿಕೆ ದಾಖಲಾಗಿದೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹಿಡಕಲ್ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ನಾಲ್ಕು ಅಡಿಗೂ ಹೆಚ್ಚು ಏರಿಕೆಯಾಗಿದೆ.

2,175 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಹಿಡಕಲ್ ಜಲಾಶಯದಲ್ಲಿ ಭಾನುವಾರ 2,094 ಅಡಿ ನೀರು ಸಂಗ್ರಹವಾಗಿದ್ದರೆ, ಸೋಮವಾರ ಅದು 2,098.05 ಅಡಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಒಳಹರಿವಿನ ಪ್ರಮಾಣ 5,377 ಕ್ಯೂಸೆಕ್‌ನಿಂದ 14,143 ಕ್ಯೂಸೆಕ್‌ಗೆ ಹೆಚ್ಚಾಗಿದೆ.

ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಲಪ್ರಭಾ ನದಿಯ ಹರಿವು ಸಹ ಹೆಚ್ಚಾಗಿದೆ. ಇದರಿಂದ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯಕ್ಕೆ ಸೋಮವಾರ 2,069 ಕ್ಯೂಸೆಕ್ ನೀರು ಹರಿದುಬಂದಿದ್ದು, ಭಾನುವಾರ ಈ ಪ್ರಮಾಣ ಕೇವಲ 622 ಕ್ಯೂಸೆಕ್ ಆಗಿತ್ತು.

ಬೆಳಗಾವಿ ನಗರದಲ್ಲೂ ಮಳೆ ನಿರಂತರವಾಗಿ ಸುರಿಯುತ್ತಿದೆ. ಭಾನುವಾರ ರಾತ್ರಿ ಆರಂಭವಾದ ಮಳೆ ಸೋಮವಾರ ಸಂಜೆಯವರೆಗೂ ಮುಂದುವರಿದ ಪರಿಣಾಮ ನಗರದ ವಿವಿಧೆಡೆ ಏಳು ಮರಗಳು ನೆಲಕ್ಕುರುಳಿವೆ. ಕುವೆಂಪು ನಗರದ ಪ್ರೆಸ್ ಕಾಲೊನಿ ಹಾಗೂ ಭಾಗ್ಯನಗರದಲ್ಲಿ ಮರಗಳು ಕಾರುಗಳ ಮೇಲೆ ಬಿದ್ದ ಪರಿಣಾಮ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ಖಾನಾಪುರ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯ ಪ್ರಮುಖ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ನದಿಗಳಲ್ಲಿ ನೀರಿನ ಹರಿವು ಅಪಾಯಕಾರಿಯಾಗಿ ಹೆಚ್ಚಿರುವುದರಿಂದ ಸಾರ್ವಜನಿಕರು ನದಿತೀರಗಳಿಗೆ ಇಳಿಯಬಾರದು ಹಾಗೂ ಜಲಪಾತಗಳಲ್ಲಿ ರೀಲ್ಸ್ ಅಥವಾ ವಿಡಿಯೊ ಚಿತ್ರೀಕರಣದಂತಹ ಸಾಹಸಗಳಿಗೆ ಮುಂದಾಗಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಪ್ರತಿದಿನ ಸರಾಸರಿ ಅರ್ಧ ಅಡಿ ಏರಿಕೆಯಾಗುತ್ತಿದ್ದು, ನಗರದಲ್ಲಿ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲೇ ನಿವಾರಣೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಮಳೆಯಿಂದ ಇದುವರೆಗೆ ಜಿಲ್ಲೆಯ ಐದು ಮನೆಗಳಿಗೆ ಹಾನಿಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ವಡ್ರಾಳ ಗ್ರಾಮದಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಎಮ್ಮೆ ಒಂದು ಮೃತಪಟ್ಟಿದೆ. ಮುಳುಗಡೆಯಾದ ಸೇತುವೆಗಳ ಬಳಿ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಪೊಲೀಸ್ ಇಲಾಖೆ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ತುರ್ತು ಸೇವೆಗೆ ಸಜ್ಜಾಗಿದ್ದು, ಅಗತ್ಯ ಬಿದ್ದರೆ ಕೇವಲ 15 ನಿಮಿಷಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಪ್ರಕರಣ: 7,000 ಪುಟಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ'ಸ್ತನ ಹಿಡಿದರೆ ಅತ್ಯಾಚಾರ ಯತ್ನವಲ್ಲ' ಎಂದ ಹೈಕೋರ್ಟ: ಸುಪ್ರೀಮ ಕೋರ್ಟ ತರಾಟೆಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ; 30ಕ್ಕೂ ಹೆಚ್ಚು ತಹಶೀಲ್ದಾರಗಳಿಗೆ ಹೊಸ ನಿಯುಕ್ತಿಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಅವಧಿ ವಿಸ್ತರಣೆಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆಮಹಿಳಾ ಸಂಘದ ಹೆಸರಲ್ಲಿ ₹43.40 ಲಕ್ಷ ವಂಚನೆ: ಇಬ್ಬರು ಮಹಿಳೆಯರ ಬಂಧನಕಡಲೆಕಾಯಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕನ ಸಾವುಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!10ನೇ ತರಗತಿಗೆ ಮೂರನೇ ಭಾಷೆ ಕಡ್ಡಾಯ; 2027–28ರಿಂದ ಸಿಬಿಎಸ್‌ಇ ಹೊಸ ನಿಯಮಬಿಜೆಪಿ ಸ್ವಾರ್ಥಕ್ಕೆ ಬಡವರ ಮಕ್ಕಳು ಬಲಿ: ಖರ್ಗೆ