Please assign a menu to the primary menu location under menu

State

ಪೊಲೀಸರು ಇನ್ನು ಮುಂದೆ ರಾತ್ರಿ ಪ್ರಯಾಣಿಸುವಂತಿಲ್ಲ 

vidhansoudha

ಬೆಂಗಳೂರು: ಇತ್ತೀಚಿಗೆ ಆಂಧ್ರಪ್ರದೇಶ ಬಳಿ ಗಾಂಜಾ ಗ್ಯಾಂಗ್ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಕಾರು ಅಪಘಾತಕ್ಕೆ ಈಡಾಗಿತ್ತು. ಈ ಘಟನೆಯಲ್ಲಿ ಸಬ್ ಇನ್ಸಪೆಕ್ಟರ್, ಕಾನ್ಸಟೇಬಲ್ ಸೇರಿ ಮೂವರು ಸಿಬ್ಬಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಕಾರಣಕ್ಕಾಗಿ ರಾಜ್ಯ ಸರ್ಕಾರವು ಪೊಲೀಸರ ರಾತ್ರಿ ಪ್ರಯಾಣವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಪೊಲೀಸ್ ಇಲಾಖೆಯ ಸಿಐಡಿ ಡಿಜಿಪಿ ಅವರು ಆದೇಶ ಹೊರಡಿಸಿದ್ದು, ಕಾನೂನು ಸುವ್ಯವಸ್ಥೆ ಬಂದೋಬಸ್ತ, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖೆ ಸೇರಿದಂತೆ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಯಾವುದೇ ವಾಹನದಲ್ಲಿ ಕರ್ತವ್ಯದ ನಿಮಿತ್ತ ಅಥವಾ ಕರ್ತವ್ಯದಿಂದ ಬಿಡುಗಡೆಯಾದ ನಂತರ, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರಯಾಣ ಮಾಡದಂತೆ ತಿಳಿಸಲಾಗಿದೆ.

ಪೊಲೀಸರ ಹಿತದೃಷ್ಠಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸಿ, ಪೊಲೀಸ್ ಇಲಾಖೆಯಿಂದ ಈ ಆದೇಶಿಸಲಾಗಿದೆ.


Samadarshi News

Leave a Reply