This is the title of the web page

ಭರ್ಜರಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ

ಬೆಳಗಾವಿ : ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ನಾಲ್ಕನೇ ಸುತ್ತಿನಲ್ಲಿ 21 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಭರ್ಜರಿ ಗೆಲುವು ಖಚಿತವಾದಂತಾಗಿದೆ. ಎದುರಾಳಿ ಕಾಂಗ್ರೆಸ್  ಅಭ್ಯರ್ಥಿ ಧೂಳೀಪಟ ಆಗಿದ್ದು ಹೀನಾಯ ಸೋಲಿನತ್ತ ಸಾಗಿದ್ದಾರೆ

ಈ ಮೂಲಕ ಎದುರಾಳಿ ಅಭ್ಯರ್ಥಿಗೂ ಹನುಮಂತ ನಿರಾಣಿಗೆ ಮತ ಅಂತರ ತುಂಬಾ ವ್ಯತ್ಯಾಸವಿದ್ದು, ಹನುಮಂತ ನಿರಾಣಿ ಗೆಲುವು ಪಕ್ಕಾ ಆಗಿದೆ.

ಹನುಮಂತ ನಿರಾಣಿ ಅವರಿಗೆ 27, 580 ಮತಗಳು ಬಂದರೆ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ ಸಂಕ ಅವರಿಗೆ 6036 ಮತ ಗಳಿಸಿದ್ದಾರೆ.

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಒಟ್ಟು 65,914 ಮತಗಳು ಚಲಾವಣೆಯಾಗಿವೆ. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಗೆಲುವು ಪಕ್ಕಾ ಆಗಿದೆ.

You might also like
Leave a comment