This is the title of the web page

ಉತ್ತರ ಕರ್ನಾಟಕ ಸೇರಿ 50 ಹೊಸ ರಾಜ್ಯಗಳು ಉದಯ ಆಗಲಿವೆ

ಬೆಳಗಾವಿ: 2024 ರ ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳು ಉದಯವಾಗಲಿವೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

ನಗರದಲ್ಲಿ ನ್ಯಾಯವಾದಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕ ಸೇರಿದಂತೆ ಎರಡು ರಾಜ್ಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ ಎಂದರು.

2024 ರ ಚುನಾವಣೆ ನಂತರ ಮೋದಿ ಅವರೇ ಹೊಸ ರಾಜ್ಯಗಳನ್ನು ಪ್ರಕಟಿಸಲಿದ್ದಾರೆ. ಕರ್ನಾಟಕದಲ್ಲಿ ಎರಡು ರಾಜ್ಯಗಳು ಅಸ್ತಿತ್ವಕ್ಕೆ ಬರಲಿವೆ ಎಂದರು.

ಕುಂದಾನಗರಿಯಲ್ಲಿ ಸುವರ್ಣ ವಿಧಾನಸೌಧ ಹೊಂದಿದೆ. ಧಾರವಾಡದಲ್ಲಿ ಹೈಕೋರ್ಟ ಇದೆ. ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಚಿಂತನೆ ನಡೆದಿದೆ. ಉತ್ತರ ಕರ್ನಾಟಕ ಎಲ್ಲ ಸೌಲಭ್ಯಗಳನ್ನು ಹೊಂದಿದಂತಾಗಿದ್ದು ನೂತನ ರಾಜ್ಯ ಆಗುವದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.

ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆ ಮಾಡುವುದರಲ್ಲಿ ಯಾವ ತಪ್ಪಿಲ್ಲ. ಅದಕ್ಕೆ ಎಲ್ಲರೂ ಕೂಡಿ ಪ್ರಯತ್ನಿಸಬೇಕು ಎಂದರು.

You might also like
Leave a comment