This is the title of the web page

ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿಗೆ ಅವಕಾಶ ನೀಡೊಲ್ಲ : ಡಿ.ಕೆ.ಶಿವಕುಮಾರ

 

ಬೆಂಗಳೂರು, ೧೫-  ಉತ್ತರ ಪ್ರದೇಶ ಸರ್ಕಾರದಂತೆ ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿಗೆ ಅವಕಾಶ ನೀಡುವು್ಲ್ಲಇ ಎಂದು ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಈಗಾಗಲೇ ಬುಲ್ಡೋಜರ್ ಮೂಲಕ ಮನೆಗಳ ನೆಲಸಮ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಜನರನ್ನು ಹೆದರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗುತ್ತಿದೆ. ಅಲ್ಪಸಂಖ್ಯಾತರನ್ನು ಹೆದರಿಸುವುದು ಕರ್ನಾಟಕದಲ್ಲಿ ನಡೆಯಲ್ಲ ಎಂದು ಗುಡುಗಿದರು.

ಒಂದು ವೇಳೆ ಇಂತಹ ಕ್ರಮಕ್ಕೆ ಮುಂದಾದರೆ ನಾವೇ ಹೋಗಿ ಬುಲ್ಡೋಜರ್ ಮುಂದೆ ಮಲಗಿ ಪ್ರತಿಭಟಿಸುತ್ತೇವೆ ಎಂದು ಕಿಡಿಕಾರಿದರು.

You might also like
Leave a comment