This is the title of the web page

3 ಡೋಸ್ ಪಡೆದ ವ್ಯಕ್ತಿಗೆ ಓಮಿಕ್ರಾನ್ ಸೋಂಕು

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಮುಂಬೈ, 18- ಅಮೇರಿಕೆಯ ನ್ಯೂಯಾರ್ಕನಿಂದ ಭಾರತಕ್ಕೆ ಹಿಂದಿರುಗಿರುವ 29 ವರ್ಷದ ವ್ಯಕ್ತಿಯಲ್ಲಿ ಶುಕ್ರವಾರ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದನ್ನು ಬೃಹನ್ ‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ದೃಢಪಡಿಸಿದೆ.

ಈ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣದ ಯಾವುದೇ ಲಕ್ಷಣಗಳಿಲ್ಲ. ಈ ವ್ಯಕ್ತಿ ಫಿಜರ್‌ನ ಕೊರೋನ ವೈರಸ್ ಲಸಿಕೆಯ ಮೂರು ಡೋಸ್ ತೆಗೆದುಕೊಂಡಿದ್ದಾರೆ. ಆದರೂ ಕೂಡ ಸೋಂಕು ಆವರಿಸಿದೆ.

ನವೆಂಬರ್ 9 ರಂದು ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ಬಳಿಕ ಅವರ ಮಾದರಿಗಳನ್ನು ಜೀನೋಮ್ ಸಿಕ್ವೀನ್ಸಿಂಗ್‌ಗಾಗಿ ಕಳುಹಿಸಲಾಯಿತು. ಅಲ್ಲಿ ಅವರು ಓಮಿಕ್ರಾನ್‌ಗೆ ಒಳಗಾಗಿದ್ದಾರೆ ಎಂಬುದು ಪತ್ತೆಯಾಗಿದೆ.

ಯುವಕನ ಸಂಪರ್ಕದಲ್ಲಿದ್ದ ಇಬ್ಬರಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.
ಸೋಂಕಿತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ” ಎಂದು ನಾಗರಿಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನಲ್ಲಿ ಓಮಿಕ್ರಾನ್ ರೋಗಿಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದ್ದು ಇದರಲ್ಲಿ ಐದು ಮಂದಿ ಮುಂಬೈ ಹೊರಗಿನವರು ಸೇರಿದ್ದಾರೆ. ಈ ಪೈಕಿ 13 ರೋಗಿಗಳು ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇದುವರೆಗೆ ಕಂಡುಬಂದ 15 ಓಮಿಕ್ರಾನ್ ರೋಗಿಗಳಲ್ಲಿ ಯಾರಲ್ಲೂ ತೀವ್ರತರವಾದ ರೋಗಲಕ್ಷಣಗಳು ಇರಲಿಲ್ಲ ಎಂದು ಮಹಾನಗರಪಾಲಿಕೆ ಹೇಳಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ರೋಗಿಗಳ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ.

You might also like
Leave a comment