Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Local News

ಕಲುಷಿತ ನೀರು ಸೇವಿಸಿ ಓರ್ವನ ಸಾವು, 70 ಜನ ಅಸ್ವಸ್ಥ


ಬೆಳಗಾವಿ : ಕಲುಷಿತ ನೀರು ಸೇವಿಸಿ ಓರ್ವ ಮೃತಪಟ್ಟು 70 ಜನ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದ್ದೇನೂರು ಗ್ರಾಮದಲ್ಲಿ ಸಂಭವಿಸಿದೆ.

ಸಾರ್ವಜನಿಕ ಕೊಳವೆ ಬಾವಿ ಬಳಿ ಕೊಳಚೆ ನೀರು ಸಂಗ್ರಹವಾಗಿತ್ತು, ಈ ನೀರು ಕೊಳವೆ ಬಾವಿಯಲ್ಲಿ ಸೇರಿ ಕಲುಷಿತಗೊಂಡಿದೆ. ಜನ ಅದನ್ನೇ ಸೇವಿಸಿದ ನಂತರ ವಾಂತಿ, ಬೇದಿಗೋಳಗಾಗಿದ್ದಾರೆ, ತೀವ್ರ ಅಸ್ವಸ್ತಗೊಂಡವರಲ್ಲಿ 70 ವರ್ಷದ ಶಿವಪ್ಪ ಬೆಳ್ಳಾವಿ ಎಂಬವರು ಮೃತಪಟ್ಟಿದ್ದು, 70 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಹತ್ತು ಜನರನ್ನು ಬೆಳಗಾವಿ ಮತ್ತು ಬಾಗಲಕೋಟ ಸರಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಕಲುಷಿತ ನೀರು ಸೇರಿರುವ ಕೊಳವೆ ಬಾವಿಯ ಬಳಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಂದ್ ಮಾಡಲಾಗಿದೆ. ಉಳಿದ ಕೊಳವೆ ಬಾವಿಗಳ ನೀರನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಗ್ರಾಮದಲ್ಲಿ ಡಂಗೂರದ ಮೂಲಕ ಸಾರಲಾಗಿದ್ದು, ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ.


A B Dharwadkar
the authorA B Dharwadkar

Leave a Reply