This is the title of the web page

ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

ಹಾಪುರ(ಉತ್ತರ ಪ್ರದೇಶ): ದೆಹಲಿ-ಮೀರತ್ ಎಕ್ಸ್‌ಪ್ರೆಸ್ ‌ವೇದಲ್ಲಿ ಛಜರ್ಸಿ ಟೋಲ್ ಪ್ಲಾಜಾ ಬಳಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ ಓವೈಸಿ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಕನಿಷ್ಠ 3-4 ಸುತ್ತು ಗುಂಡುಗಳನ್ನು ಹಾರಿಸಲಾಗಿದ್ದು ಎಐಎಂಐಎಂ ಮುಖ್ಯಸ್ಥರು ಉತ್ತರಪ್ರದೇಶದ ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮದ ನಂತರ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಎಂದು ಅಸಾದುದ್ದೀನ ಓವೈಸಿ ಗುರುವಾರ ಹೇಳಿದ್ದಾರೆ.

ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ವಾಹನದ ಮೇಲೆ ಸುಮಾರು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದರು, ಅವರು ಒಟ್ಟು ಮೂರರಿಂದ ನಾಲ್ಕು ಜನರಿದ್ದರು. ನನ್ನ ವಾಹನದ ಟೈರ್‌ಗಳು ಪಂಕ್ಚರ್ ಆಗಿದ್ದು ನಾನು ಇನ್ನೊಂದು ವಾಹನದಲ್ಲಿ ಹೊರಟೆ” ಎಂದು ಎಐಎಂಐಎಂ ಮುಖ್ಯಸ್ಥರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಎಐಎಂಐಎಂ ಮುಖ್ಯಸ್ಥರ ವಾಹನದ ಮೇಲಿನ ದಾಳಿಯನ್ನು ಉತ್ತರ ಪ್ರದೇಶದ ಸಚಿವ ಮೊಹ್ಸಿನ ರಜಾ ಖಂಡಿಸಿದ್ದಾರೆ ಮತ್ತು ಇದು ದುರದೃಷ್ಟಕರ ಘಟನೆಯಾಗಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಅನಿಲಾ ಸಿಂಗ್, ದಾಳಿಗೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

You might also like
Leave a comment