This is the title of the web page

10 ವಿಕೆಟ್ ಕ್ಲಬ್ ಸೇರಿದ ಪಟೇಲ

ಮುಂಬೈ, 4- ಟೆಸ್ಟ್ ಕ್ರಿಕೆಟ್ ಪಂದ್ಯವೊಂದರ ಇನ್ನಿಂಗ್ಸ್ ನಲ್ಲಿ ಎಲ್ಲ ಹತ್ತು ವಿಕೆಟ್ ಪಡೆದ ಕೀರ್ತಿಗೆ ನ್ಯೂಜಿಲೆಂಡ್ ಸ್ಪೀನರ್ ಏಜಾಜ್ ಪಟೇಲ ಭಾಜನರಾಗಿದ್ದಾರೆ.

ಇನ್ನಿಂಗ್ಸ್ ನ ಹತ್ತೂ ವಿಕೆಟ್ ಪಡೆದಿದ್ದ ಇಂಗ್ಲೆಂಡ್‌ನ ಸ್ಪಿನ್ನರ್ ಜಿಮ್ ಲೇಕರ್ ಮತ್ತು ಭಾರತದ ಅನಿಲ ಕುಂಬ್ಳೆ ಅವರ “ವಿಕೆಟ್ 10” ಕ್ಲಬ್ ಸೇರಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಏಜಾಜ್ ಪಟೇಲ್ ಒಬ್ಬರೇ ಭಾರತದ 10 ಆಟಗಾರರ ವಿಕೆಟ್ ಕಬಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಸಾಧನೆಗೈದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.

1999 ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು 10 ವಿಕೆಟ್ ಪಡೆಯುವ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದ ಸಾಧನೆ ಸರಿಗಟ್ಟಿದ್ದರು. ಇಂದು ಆ ಪಟ್ಟಿಗೆ ನ್ಯೂಜಿಲೆಂಡ್‌ನ ಏಜಾಜ್ ಪಟೇಲ್ ಸಹ ಸೇರಿಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ಭಾರತ ಉತ್ತಮ ಆರಂಭವನ್ನೇ ಪಡೆದಿತ್ತು. ಮಯಾಂಕ್ ಅಗರ್ವಾಲ್ ಶತಕ ಬಾರಿಸಿದರೆ, ಶುಭಮನ್ ಗಿಲ್ ಮತ್ತು ಅಕ್ಷರ ಪಟೇಲ್ ಅರ್ಧಶತಕ ಬಾರಿಗೆ ಭಾರತ 325 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಆದರೆ ನ್ಯೂಜಿಲೆಂಡ್‌ನ ಏಜಾಜ್ ಪಟೇಲ್ ಮಾತ್ರ ತಮ್ಮ ಮೊನಚಾದ ಬೌಲಿಂಗ್ ದಾಳಿಯಿಂದ 10 ವಿಕೆಟ್ ಪಡೆದು ಮಿಂಚಿದರು.

You might also like
Leave a comment