This is the title of the web page

ಮಾನವ ಹಕ್ಕುಗಳ ರಕ್ಷಣೆಯಿಂದ ಶಾಂತಿಯುತ ಜೀವನ

ಗೋಕಾಕ, ಮಾ.೨೮- ಮಾನವ ಹಕ್ಕುಗಳ ರಕ್ಷಣೆಯಿಂದ ಜನರು ಶಾಂತಿಯುತ ಜೀವನ ನಡೆಸಲು ಸಾಧ್ಯ ಎಂದು ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಕೆ.ಎಂ. ಶಂಕರ ಹೇಳಿದರು.

ನಗರದ ಕೆಎಲ್‌ಇ ಶಾಲಾ ಆವರಣದಲ್ಲಿ ರವಿವಾರ ನಡೆದ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗ ಜಿಲ್ಲಾ ಘಟಕ, ತಾಲೂಕಾ ಘಟಕ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಆಯೋಗದ ತಾಲೂಕು ಘಟಕದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಈ ಹಕ್ಕುಗಳ ಉಲ್ಲಂಘನೆಯಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ ಎಂದರು.

ಮಾನವ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ. ಸಂವಿಧಾನದಲ್ಲಿ ನೀಡಿದ ಹಕ್ಕುಗಳ ಸಂರಕ್ಷಣೆಯಾಗಬೇಕು. ಸಾಮಾಜಿಕ ನ್ಯಾಯವನ್ನು ಸಮಾಜದಲ್ಲಿ ತರಬೇಕು. ಪ್ರತಿ ಪ್ರಜೆಗೆ ಎಲ್ಲಾ ರೀತಿಯ ಸಮಾನತೆ ದೊರೆಯಬೇಕು ಎಂದು ಅವರು ಹೇಳಿದರು.

ಜನತೆಯಲ್ಲಿ ಕಾನೂನು ಅರಿವು ಮೂಡಿಸಿ ಈ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಜಾಗೃತಿಯೊಂದಿಗೆ ಅವುಗಳ ಪಾಲನೆ ಮಾಡುವ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆ ಮಾಡುವಂತೆ ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗದ ಪದಾಧಿಕಾರಿಗಳಾದ ಶ್ರೀಮತಿ ಸಂಗೀತಾ ಬನ್ನೂರ, ಅಶೋಕ ಕೆಂಗಣ್ಣವರ, ಮಹಾಂತೇಶ ತಾವಂಶಿ, ಸಿ.ಡಿ. ಹುಕ್ಕೇರಿ, ಮಂಗಳಾ ಜಕಾತಿ, ವೈಶಾಲಿ ಭರಭರಿ, ವಾಣಿ ನಾಯಿಕ, ಸುಕನ್ಯಾ ಹೇರಲಗಿ, ಮಂಜುಳಾ ಮುಳ್ಳೂರ, ಶಾಮಾನಂದ ಪೂಜೇರಿ ಹಾಗೂ ಸಿಡಿಪಿಓ ಜಯಶ್ರೀ ಶೀಲವಂತ, ರಾಮಚಂದ್ರ ಕಾಕಡೆ, ಚೇತನ ಜೋಗನ್ನವರ, ವಿಜಯಲಕ್ಷ್ಮಿ ಮನಗುಂಡಿ ಭಾಗವಹಿಸಿದ್ದರು.

 

 

You might also like
Leave a comment