Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

1500 ರೂ. ಗಾಗಿ ಬೈಕ್‌ಗೆ ಕಟ್ಟಿ ವ್ಯಕ್ತಿಯನ್ನು ಓಡಿಸಿದ ಜನ


ಭುವನೇಶ್ವರ : 1,500 ರೂ. ಹಣಕ್ಕಾಗಿ  22 ವರ್ಷದ ವ್ಯಕ್ತಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಹಾಕಿ ಸುಮಾರು ಎರಡು ಕಿಲೋಮೀಟರ್ ಓಡಿಸಿರುವ ಅಮಾನವೀಯ ಘಟನೆ ಒಡಿಶಾ ರಾಜ್ಯದ ಕಟಕ್ ನಗರದ ಜನನಿಬಿಡ ರಸ್ತೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕಟಕ್ ನಗರ ಉಪ ಪೊಲೀಸ್ ಆಯುಕ್ತ ಪಿನಾಕ ಮಿಶ್ರಾ ತಿಳಿಸಿದ್ದಾರೆ. ಹಿಂಸೆಗೆ ಒಳಗಾಗಿರುವ ವ್ಯಕ್ತಿಯನ್ನು ಜಗನ್ನಾಥ ಬೆಹೆರಾ ಎಂದು ಗುರುತಿಸಲಾಗಿದೆ.
https://twitter.com/ndtv/status/1582277020406272001?t=WNvNeHD1uC8c_Z38kIzU4A&s=19
ಅವರ ಕೈಗಳನ್ನು 12 ಅಡಿ ಉದ್ದದ ಹಗ್ಗದಿಂದ ಕಟ್ಟಲಾಗಿತ್ತು, ಅದರ ಇನ್ನೊಂದು ತುದಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಲಾಗಿತ್ತು. ಸುಮಾರು 20 ನಿಮಿಷಗಳ ಕಾಲ ಸ್ಟುವರ್ಟ್‌ಪಟ್ನಾ ಚೌಕದಿಂದ ಸುತಾಹತ್ ಚೌಕದವರೆಗೆ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರದವರೆಗೆ ಅವರನ್ನು ಓಡಿಸಿಕೊಂಡು ಹೋಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ತಿಂಗಳು ಜಗನ್ನಾಥ ಅವರು ಆರೋಪಿಗಳಿಂದ 1,500 ರೂ.ಗಳನ್ನು ತಮ್ಮ ಅಜ್ಜನ ಅಂತಿಮ ಸಂಸ್ಕಾರಕ್ಕಾಗಿ ಎರವಲು ಪಡೆದಿದ್ದರು. ಅದನ್ನು ವಾಪಸ್​ ನೀಡದ ಕಾರಣ ಈ ರೀತಿ ಹಿಂಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.


A B Dharwadkar
the authorA B Dharwadkar

Leave a Reply