This is the title of the web page

ನಾಳೆಯಿಂದ ಲೋಕಾಯುಕ್ತರಿಂದ ಜನರ ಅಹವಾಲು ಸ್ವೀಕಾರ

ಬೆಳಗಾವಿ : ಎಲ್ಲಾ ತಾಲೂಕು ಕೇಂದ್ರಗಳಿಗೆ ಜೂನ್ 21 ರಿಂದ 24 ರವರಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗಿನ ಸಮಯದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಸರ್ಕಾರಿ ಅಧೀಕೃತ ಕೆಲಸಗಳನ್ನು ಮಾಡಿರುವುದಕ್ಕೆ ವಿಳಂಬ ಹಾಗೂ ಇನ್ನೀತರ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ದೂರು ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಪ್ರವಾಸಿ ಮಂದಿರ ಅಥಣಿ ಜೂನ್-21 (ಅಥಣಿ ಕಾಗವಾಡ,) ಜೂನ್ 22 ಪ್ರವಾಸಿ ಮಂದಿರ ಡೊಂಬರಕೊಪ್ಪ (ಕಿತ್ತೂರ ) ಪ್ರವಾಸಿ ಮಂದಿರ (ರಾಮದುರ್ಗ) ಪ್ರವಾಸಿ ಮಂದಿರ (ಹುಕ್ಕೇರಿ), ಜೂನ್ 23 ಪ್ರವಾಸಿ ಮಂದಿರ (ನಿಪ್ಪಾಣಿ ) , ಜೂನ್24 ಪ್ರವಾಸಿ ಮಂದಿರ ಗೋಕಾಕ.( ಗೋಕಾಕ &ಮೂಡಲಗಿ ) ಜೂನ್ 24 ಬೆಳಗಾವಿ ಲೋಕಾಯುಕ್ತರ ಕಚೇರಿ (ಬೆಳಗಾವಿ,) ಎಂದು ಪೋಲಿಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತರು ಬೆಳಗಾವಿ, ಈ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಅಹಲವಾಲು ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You might also like
Leave a comment