This is the title of the web page

ಪೆಟ್ರೋಲ, ಡೀಸೆಲ್ ದರ ಮತ್ತೆ ಏರಿಕೆ

ಹೊಸದಿಲ್ಲಿ, ೨೫- ಒಮ್ಮೆಲೆ ಇಂಧನ ಬೆಲೆಗಳನ್ನು ಏರಿಸದೇ ಸ್ವಲ್ಪ ಸ್ವಲ್ಪ ಏರಿಸುವ ಕೆಲಸ ನಿತ್ಯ ನಡೆದಿದ್ದು ಇಂದು ಶುಕ್ರವಾರ ಬೆಳಿಗ್ಗೆ ಆರು ಗಂಟೆಯಿಂದ ಮತ್ತೆ ಪೆಟ್ರೋಲ ಮತ್ತು ಡೀಸೆಲ್ ಬೆಲೆ 80 ಪೈಸೆ ಏರಿಕೆ ಮಾಡಲಾಗಿದೆ.

ದೆಹಲಿಯಲ್ಲಿ 80 ಪೈಸೆ ಹೆಚ್ಚಳದ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ ರೂ.97.81 ರೂಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ. 89.07 ದಾಖಲಾಗಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ ಬೆಲೆ 84 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ.ಪೆಟ್ರೋಲ ದರ ರೂ.112.51, ಡೀಸೆಲ್ ರೂ. 96.70 ದಾಖಲಾಗಿದೆ.

ಬೆಂಗಳೂರಿನಲ್ಲಿ 102.26 ರೂ ಇದ್ದ ಪೆಟ್ರೋಲ ದರ 103.11 ರೂಗೆ ಏರಿಕೆಯಾಗಿದೆ. ಪ್ರತಿ ಲೀಟರ್​ಗೆ 86.58 ರೂ ಇದ್ದ ಡೀಸೆಲ್ ದರ ರೂ. 87.37 ಗೆ ಏರಿಕೆಯಾಗಿದೆ.

You might also like
Leave a comment