This is the title of the web page

ಸತತ ಎರಡನೇ ದಿನ ಪೆಟ್ರೋಲ, ಡೀಸೆಲ್ ದರ ಏರಿಕೆ

ಹೊಸದಿಲ್ಲಿ, ೨೩-: ಪೆಟ್ರೋಲ‌ ಮತ್ತು ಡೀಸೆಲ್‌ ಬೆಲೆ ಎರಡನೇ ದಿನವೂ ಏರಿಕೆಯಾಗಿದ್ದು ತಲಾ 80 ಪೈಸೆ ಹೆಚ್ಚಳ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಬುಧವಾರ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ‌ ಲೀಟರ್‌ಗೆ 102.26 ರೂಪಾಯಿ ಇದ್ದರೆ, ಡೀಸೆಲ್‌ 85.80 ರೂಪಾಯಿ ಇದೆ.

ದೆಹಲಿಯಲ್ಲಿ ಪೆಟ್ರೋಲ ದರವು 96.21 ರೂ.ನಿಂದ 97.01 ರೂ. ಏರಿಕೆಯಾಗಿದೆ. ಡೀಸೆಲ್ ದರಗಳು ಲೀಟರ್‌ಗೆ 88.27 ರೂಪಾಯಿಂದ 86.67 ಕ್ಕೆ ಜಿಗಿದಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ‌ 111.67 ರೂ. ಮತ್ತು ಡೀಸೆಲ್‌ 95.85 ರೂಪಾಯಿಗೆ ಮಾರಾಟ ಆಗುತ್ತಿದೆ.

ದೇಶದಲ್ಲಿ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ನಾಲ್ಕೂವರೆ ತಿಂಗಳ ಬಳಿಕ ನಿನ್ನೆ ಅಡುಗೆ ಅನಿಲ ಸಿಲಿಂಡರ್‌ 50 ರೂಪಾಯಿ ಹಾಗೂ ಪೆಟ್ರೊಲ್‌ ಮತ್ತು ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಲಾಗಿತ್ತು

You might also like
Leave a comment