This is the title of the web page

ವಾರದಲ್ಲಿ 5ನೇ ಬಾರಿ ಏರಿದ ಪೆಟ್ರೋಲ್, ಡೀಸೆಲ್ ದರ

ಹೊಸದಿಲ್ಲಿ, ೨೭-: ತೈಲ ದರಗಳನ್ನು ರವಿವಾರ ಕೂಡ ಏರಿಕೆ ಮಾಡಲಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 50 ರಿಂದ 55 ಪೈಸೆಯಷ್ಟು ಮತ್ತು ಪ್ರತೀ ಲೀಟರ್ ಡೀಸೆಲ್ ದರ 55ರಿಂದ 58 ಪೈಸೆಯಷ್ಟು ಏರಿಕೆ ಕಂಡಿದೆ. ಐದು ರಾಜ್ಯಗಳ ಚುನಾವಣೆ ನಂತರ ದರ ಏರಿಕೆ ನಾಗಾಲೋಟದಲ್ಲಿದೆ.

ಇಂದಿನ ದರ ಏರಿಕೆ ಮೂಲಕ ಒಂದೇ ವಾರದಲ್ಲಿ ಐದನೇ ಬಾರಿ ತೈಲ ದರ ಏರಿಕೆಯಾದಂತಾಗಿವೆ. ಶನಿವಾರ ಕೂಡ ಪೆಟ್ರೋಲ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿತ್ತು.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 104.44 ರೂಪಾಯಿ ಹಾಗೂ ಡೀಸೆಲ್ ದರ 88.66 ರೂಪಾಯಿ ದಾಖಲಾಗಿದೆ

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ ಬೆಲೆ 50 ಪೈಸೆ ಏರಿಕೆಯಾಗಿ 99.11ರೂಗೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ಬೆಲೆ 55 ಪೈಸೆ ಹೆಚ್ಚಳವಾಗಿ 90.42ರೂಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 53 ಪೈಸೆ ಏರಿಕೆಯಾಗಿ 113.88 ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 58 ಪೈಸೆ ಏರಿಕೆಯಾಗಿ 98.13ರೂಗೆ ಏರಿಕೆಯಾಗಿದೆ.

You might also like
Leave a comment