This is the title of the web page

ಹಳೆಯ ವಿದ್ಯಾರ್ಥಿನಿಯೊಂದಿಗೆ ಸಂಬಂಧ; ದೈಹಿಕ ಶಿಕ್ಷಕನ ಬಂಧನ

ಸವದತ್ತಿ, 9- ತನ್ನ ಶಾಲೆಯ ಹಳೆಯ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅವಳ ಮದುವೆಯ ಸಂದರ್ಭದಲ್ಲಿ ತಮ್ಮ ಖಾಸಗಿ ಫೋಟೋಗಳನ್ನು ಗೆಳೆಯರೊಂದಿಗೆ ಹಚ್ಚಿಕೊಂಡ ಶಿಕ್ಷಕನನ್ನು ಜನರು ಥಳಿಸಿ ಪೊಲೀಸರಿಗೊಪ್ಪಿಸಿದ ಪ್ರಕರಣ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

ಯಕ್ಕುಂಡಿಯ ಸರಕಾರಿ ಹೈಸ್ಕೂಲಿನ ದೈಹಿಕ ಶಿಕ್ಷಕ ಮಹೇಶ ಶಿವಲಿಂಗಪ್ಪ ಬಿರಾದಾರ ಎಂಬವ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿನಿಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದ. ಅಲ್ಲದೇ  ಅವಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಅಲ್ಲದೇ ತಮ್ಮಿಬ್ಬರ ಖಾಸಗಿ ಕ್ಷಣಗಳನ್ನು ಆಕೆಗೆ ಗೊತ್ತಾಗದ ಹಾಗೆ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದ.

ಈಗ ಕಾಲೇಜೊಂದರಲ್ಲಿ ಓದುತ್ತಿರುವ ಆ ವಿದ್ಯಾರ್ಥಿನಿಗೆ ಮದುವೆ ನಿಶ್ಚಯವಾಗಿದ್ದು ಇದನ್ನು ತಪ್ಪಿಸಲು ಶಿಕ್ಷಕ ಬಿರಾದಾರ ಆ ಖಾಸಗಿ ವಿಡಿಯೋ ಸ್ನೇಹಿತತಿಗೆ ಶೇರ್ ಮಾಡಿದ್ದಾನೆ. ಆ ಯುವತಿಯ ಕುಟುಂಬದವರಿಗೆ ಈ ಬಿಷಯ ಗೊತ್ತಾಗಿ ಶಿಕ್ಷಕ ಬಿರಾದಾರನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

44 ವರುಷದ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

You might also like
Leave a comment