This is the title of the web page

ಕಿತ್ತೂರ ಚೆನ್ನಮ್ಮ ಅರಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿ

ಬೆಳಗಾವಿ, 23- ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಹೋರಾಟವು ದೊಡ್ಡದಿದೆ. ಈ ಕುರಿತು ಸ್ಥಳೀಯರಿಗೆ ಮಾಹಿತಿಯಿದೆ. ಆದರೆ ಪ್ರವಾಸಿಗರು ಭೇಟಿ ನೀಡಿದಾಗ ಹಳೆಯ ಅರಮನೆ ವೀಕ್ಷಿಸಿದರೆ ಕಿತ್ತೂರು ಸಂಸ್ಥಾನದ ಭವ್ಯತೆ ಅರಿವಿಗೆ ಬರುವುದಿಲ್ಲ. ಕಿತ್ತೂರಿನ ಸಂಸ್ಥಾನ ಹಾಗೂ ರಾಣಿ ಚೆನ್ನಮ್ಮನ ಗತ ವೈಭವ ಸಾರುವ ನಿಟ್ಟಿನಲ್ಲಿ ಭವ್ಯ ಅರಮನೆ ಪ್ರತಿರೂಪ(ರೆಪ್ಲಿಕಾ) ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ಸುವರ್ಣಸೌಧದ ಸಮಿತಿ ಸಭಾಂಗಣದಲ್ಲಿ ಗುರುವಾರ ಕಿತ್ತೂರು ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ರಾಣಿ ಚೆನ್ನಮ್ಮಾ ಅರಮನೆ ಕಟ್ಟಡದ ನೀಲನಕ್ಷೆ ಪ್ರಾತ್ಯಕ್ಷತೆ ವೀಕ್ಷಿಸಿ ಮಾತನಾಡಿದರು.

ಹಳೆಯ ಅರಮನೆಯನ್ನು ಪುನರ್ ಸ್ಥಾಪನೆ ಮಾಡಬೇಕು. ರಾಣಿ ಚೆನ್ನಮ್ಮನ ಸಾಹಸ, ಆಡಳಿತ, ಶೌರ್ಯ, ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಲು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಸಮಕಾಲಿನ ಅರಮನೆಯ ಪ್ರತಿ ರೂಪವನ್ನು ನಿರ್ಮಾಣ ಮಾಡಬೇಕು. ಪುರತತ್ವ, ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮಾಲೋಚಿಸಿ ಲೋಕೋಪಯೋಗಿ ಅಧಿಕಾರಿಗಳಿಂದ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಿ. ಯೋಜನೆಗೆ ಅಗತ್ಯವಾದ ಭೂಮಿಯನ್ನು ಸಹ ಮೀಸಲಿಡಿ. ವಿಸ್ತೃತ ಯೋಜನೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಮಹಾಂತೇಶ ಕೌಜಲಗಿ, ದೊಡ್ಡಗೌಡರ,ಅಮೃತ ದೇಸಾಯಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಶಾರ ಗಿರಿನಾಥ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಕಲ್ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿ, ಬೈಲಹೊಂಗಲ ಸಹಾಯಕ ಆಯುಕ್ತ ಶಶಿಧರ ಬಗಲಿ ಮತ್ತಿತರರು ಇದ್ದರು.

You might also like
Leave a comment