This is the title of the web page

ಪ್ರಧಾನಿ ಭೇಟಿ ಮಾಡಲಿರುವ ಉಕ್ರೇನ್‌ನಲ್ಲಿ ಮೃತಪಟ್ಟ ಯುವಕನ ಕುಟುಂಬಸ್ಥರು

 

ಹಾವೇರಿ: ಪ್ರಧಾನಿ ಮೋದಿ ಅವರು ಉಕ್ರೇನ್​ ಯುದ್ಧದಲ್ಲಿ ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿ ನವೀನ​ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ

ಈ ಕುರಿತು ಮೃತ ವಿದ್ಯಾರ್ಥಿ​​ ನವೀನ ತಂದೆ ಶೇಖರಗೌಡ ಗ್ಯಾನಗೌಡರ ಮಾಹಿತಿ ಹಂಚಿಕೊಂಡಿದ್ದಾರೆ. ಜೂನ್ 20ರಂದು ಪ್ರಧಾನಿ ಮೋದಿಯವರ ರಾಜ್ಯ ಭೇಟಿ ವೇಳೆ ನವೀನ್​​ ಕುಟುಂಬಸ್ಥರನ್ನು ಪ್ರಧಾನಿ ಆಹ್ವಾನಿಸಿದ್ದಾರೆ.

ಎರಡು ದಿನಗಳ ಹಿಂದೆ ಪ್ರಧಾನಿ ಕಚೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಭೇಟಿ ಬಗ್ಗೆ ನವೀನ್​​ ತಂದೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ ತಿಳಿಸಿದ್ದಾರೆ.

ಇನ್ನು ಶೇಖರಗೌಡ ಗ್ಯಾನಗೌಡರ ಕುಟುಂಬಸ್ಥರು ಈಗಾಗಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

You might also like
Leave a comment