Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಕಾಡು ಪ್ರಾಣಿಗಳಿಗೆ ಇಟ್ಟಿದ್ದ ವಿಷ ತಿಂದು ಜಾನುವಾರುಗಳ ಸಾವು 


ಜೋಯಿಡಾ : ಕಾಡುಪ್ರಾಣಿಗಳ ಕಾಟ ತಪ್ಪಿಸಲು ವಿಷ ಬೆರೆಸಿ ಇಟ್ಟಿದ್ದ ಅನ್ನವನ್ನು ಜಾನುವಾರುಗಳು ತಿಂದು ಸಾವನ್ನಪ್ಪಿರುವ ಘಟನೆ ಜೋಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ.

ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳುಗಳ ಸಾವು ಕಂಡಿದ್ದು, ಇನ್ನೂ ಏಳು ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.

ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಡು ಪ್ರಾಣಿಗಳ ಕಾಟ ತಡೆಯಲು ಅನ್ನದ ಜೊತೆ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ.

ಗೋವಿನ ಮಾಲೀಕರಾದ ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


A B Dharwadkar
the authorA B Dharwadkar

Leave a Reply