Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಬಿಜೆಪಿಯಿಂದ ಹೆಣದ ಮೇಲೆ ರಾಜಕಾರಣ : ಸಿದ್ದರಾಮಯ್ಯ 

siddaramaiah

ಶಿವಮೊಗ್ಗ: ಬಿಜೆಪಿ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ನೀಡಿ ಜನರನ್ನು ಕರೆದುಕೊಂಡು ಬಂದಿದ್ದಾರೆ. ಅದಕ್ಕಾಗಿ ಕಾರ್ಯಕ್ರಮದಲ್ಲಿ ಜನರು ಕುಳಿತುಕೊಳ್ಳುತ್ತಿಲ್ಲ. ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಆರ್‌ಎಸ್‍ಎಸ್ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿರೋಧಿಗಳ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದಾರೆ. ಬಿಜೆಪಿಯವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಿವಮೊಗ್ಗದಲ್ಲಿ ಈಶ್ವರಪ್ಪನೇ ಗಲಾಟೆ ಮಾಡಿಸುತ್ತಿರುವುದು ಎಂದ ಅವರು, ಮೀಸಲಾತಿ ಬಗ್ಗೆ ಮಾತನಾಡಲು ಶ್ರೀರಾಮುಲುಗೆ ಏನು ಗೊತ್ತಿಲ್ಲ. ಆತನಿಗೆ ಸಂವಿಧಾನವೇ ಗೊತ್ತಿಲ್ಲ. ಆತನೇ ನಾನು ಪೆದ್ದ ಅಂತಾ ಹೇಳಿಕೊಂಡಿದ್ದಾನೆ ಎಂದು ಟೀಕಿಸಿದರು.


A B Dharwadkar
the authorA B Dharwadkar

Leave a Reply