This is the title of the web page

ಅಂಚೆ ಇಲಾಖೆಯ ಜನಪ್ರಿಯ ಗೋಲ್ಡ ಬಾಂಡ್ ಖರೀದಿಗೆ ಮತ್ತೆ ಅವಕಾಶ

ಬೆಳಗಾವಿ, ೧೯- ಅಂಚೆ ಇಲಾಖೆಯಲ್ಲಿ ಸಾವರಿನ್ ಗೋಲ್ಡ ಬಾಂಡ್ ನಲ್ಲಿ ಹೂಡಿಕೆಗೆ ಭಾರಿ ಬೇಡಿಕೆಯಿದ್ದು, ಜನರ ಅಪೇಕ್ಷೆ ಮೇರೆಗೆ ಬೆಳಗಾವಿ ವಿಭಾಗೀಯ ಪ್ರಧಾನ ಅಂಚೆ ಕಛೇರಿ ಸೇರಿದಂತೆ ಜಿಲ್ಲೆಯ ವಿವಿಧ ಅಂಚೆ ಕಛೇರಿಗಳಲ್ಲಿ ಇದೆ ಜೂನ್ 20 ರಿಂದ 24 ನೇ ತಾರೀಕಿನವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರಾದ ಎಸ್ ವಿಜಯನರಸಿಂಹ ಅವರು ಪ್ರಕಟಣೆ ಹೊರಡಿಸಿದ್ದು, ಒಟ್ಟು ಐದು ದಿನಗಳ ವರೆಗೆ ಗ್ರಾಹಕರಿಗೆ ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇದರ ಮರಳಿಕೆ ಅವಧಿ 8 ವರ್ಷಗಳಾಗಿದ್ದು, 5 , 6 ಮತ್ತು 7ನೇ ವರ್ಷದಲ್ಲಿ ಅವಧಿ ಪೂರ್ಣ ಹಿಂಪಡೆಯಲು ಅವಕಾಶವಿದೆ. ಬಾಂಡ್ ಮೂಲಕ ತೊಡಗಿಸಿದ ಹಣಕ್ಕೆ ವಾರ್ಷಿಕ ಶೇಕಡಾ 2.5%ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಹೂಡಿಕೆಗೆ ಜಿಎಸ್ ಟಿ ಹೊರೆ ಇಲ್ಲ, ಟಿಡಿಎಸ್ ಕಡಿತವಿಲ್ಲ. ಚಿನ್ನದ ಮೇಲಿನ ಹೂಡಿಕೆ ಯಾಗಿದ್ದರೂ , ಅಂಗಡಿಯಲ್ಲಿ ಚಿನ್ನದ ಖರೀದಿ ಮೇಲಿನ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ಇರುವುದಿಲ್ಲ. ಕನಿಷ್ಠ 1 ಗ್ರಾಂ ದಿಂದ, 4೦೦೦ ಗ್ರಾಂ ವರೆಗೆ ಖರೀದಿಗೆ ಅವಕಾಶವಿದೆ.

ಪ್ರತಿ ಗ್ರಾಂ ಗೆ 5091/- ರೂಪಾಯಿ ನಿಗದಿ ಪಡಿಸಲಾಗಿದೆ. ಸಮೀಪದ ಅಂಚೆ ಕಚೇರಿಗೆ ಬೇಟಿ ನೀಡಿ, ಪಾನ್ ಕಾರ್ಡ್, ವಿಳಾಸ ದಾಖಲೆ ಹಾಗೂ ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟದ ಪ್ರತಿಯನ್ನು ಕೊಟ್ಟು, ಚೆಕ್ಕು,ಡಿಮ್ಯಾಂಡ್ ಡ್ರಾಫ್ಟ್, ಆನ್ ಲೈನ್ ಪೇಮೆಂಟ್ ಅಥವಾ ಉಳಿತಾಯ ಖಾತೆಯಿಂದ ಪೇಮೆಂಟ್ ಮಾಡುವುದರ ಮೂಲಕ ಗೋಲ್ಡ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಅಂಚೆ ಕಚೇರಿ ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಬೆಳಗಾವಿ ವಿಭಾಗಿಯ ಅಂಚೆ ಅಧೀಕ್ಷಕರಾದ ಎಸ್.ವಿಜಯನರಸಿಂಹ  ಕೋರಿದ್ದಾರೆ.

You might also like
Leave a comment