This is the title of the web page

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮುನ್ನಡೆ 

 

ಬೆಳಗಾವಿ, 15- ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 1,400 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಇನ್ನು ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮತ ಪೆಟ್ಟಿಗೆಯಲ್ಲಿ ಹೆಚ್ಚುವರಿ ಐದು ಮತ ಪತ್ರ ಪತ್ತೆಯಾಗಿ ಗೊಂದಲ ಸೃಷ್ಟಿಯಾಗಿದೆ. ಇಳಕಲ್ ಪಟ್ಟಣದ ಮತಗಟ್ಟೆ ಪೆಟ್ಟಿಗೆಯಲ್ಲಿ 171 ಮತ ಇರಬೇಕಿತ್ತು. ಆದರೆ 5 ಪತ್ರ ಹೆಚ್ಚಿವೆ.

You might also like
Leave a comment