Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime News

ಹಾವು ಕಚ್ಚಿ ಗರ್ಭಿಣಿ ಸಾವು


ವಿಜಯಪುರ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವಿಗೀಡಾದ ಘಟನೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ.

ಹೊಲದ ಪಕ್ಕದಲ್ಲೇ ಇರುವ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ವಿಷಕಾರಿ ಹಾವು ಕಚ್ಚಿದೆ. ಆಗ ತೀವ್ರ ಅಸ್ವಸ್ಥಳಾದ ನಾಲ್ಕು ತಿಂಗಳ ಗರ್ಭಿಣಿ ನಿರ್ಮಲಾ ಯಲ್ಲಪ್ಪ ಚಲವಾದಿ(25) ಮೃತಪಟ್ಟಿದ್ದಾರೆ.

ಹಾವು ಕಚ್ಚಿರುವುದು ಗೊತ್ತಾದ ತಕ್ಷಣ ಗರ್ಭಿಣಿಯನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಎಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಅಸು ನೀಗಿದ್ದಾರೆ.


A B Dharwadkar
the authorA B Dharwadkar

Leave a Reply