Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಆರ್​ಎಸ್​ಎಸ್ ಅಂದರೆ​ ರಾಷ್ಟ್ರೀಯ ಸುಳ್ಳುಗಾರರ ಸಂಘ ಅಂದ ಪ್ರೊ. ಕೆ. ಎಸ್. ಭಗವಾನ್


ಮೈಸೂರು: ಆರ್​ಎಸ್​ಎಸ್​ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರಗತಿಪರ ಚಿಂತಕ ಪ್ರೊ. ಕೆ ಎಸ್ ಭಗವಾನ್ ಹರಿಹಾಯ್ದಿದ್ದಾರೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಆರ್​ಎಸ್​ಎಸ್​ನವರು ಮಾತನಾಡುತ್ತಾರೆ. ಆದರೆ, ದೇಶದ ಧರ್ಮ ಹಿಂದೂ ಧರ್ಮವಲ್ಲ. ಬೌದ್ಧ ಧರ್ಮ ದೇಶದ ಮಣ್ಣಿನ ಧರ್ಮ ಎಂದಿದ್ದಾರೆ.

ವರ್ಣ ವ್ಯವಸ್ಥೆ ಸಮಾಜದಿಂದ ಬಿಡುಗಡೆಯಾಗಬೇಕು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದಂತೆ ನಿಮ್ಮದೇ ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಮಾಡಿ ಎಂದು ಹೇಳಿದರು.

ವರ್ಣ ವ್ಯವಸ್ಥೆ ವಿರುದ್ಧ ಪಾರ್ಲಿಮೆಂಟ್​ನಲ್ಲಿ ಮಸೂದೆ ಪಾಸ್ ಮಾಡಿಸಿ, ವರ್ಣ ವ್ಯವಸ್ಥೆಯಿಂದ ಸಮಾಜದಲ್ಲಿ ಅಸ್ಪೃಶ್ಯ ಭಾವನೆ ಇದೆ. ಸಮಾಜದಲ್ಲಿ ವರ್ಣ ವ್ಯವಸ್ಥೆಯಿಂದ ಬಿಡುಗಡೆ ಮಾಡಿಸಿ, ಸಮಾನತೆಯಿಂದ ಬದುಕಲು ಅವಕಾಶ ಒದಗಿಸಿ ಎಂದು ಪ್ರೊ. ಭಗವಾನ್​ ಒತ್ತಾಯಿಸಿದರು.


A B Dharwadkar
the authorA B Dharwadkar

Leave a Reply