This is the title of the web page

ನಂದಿ ಬೆಟ್ಟದ ಸಮೀಪ 300 ಅಡಿ ಪ್ರಪಾತಕ್ಕೆ ಬಿದ್ದಿದ್ದ ಯುವಕನ ರಕ್ಷಣೆ

ಮೈಸೂರು, 20- ನಂದಿ ಬೆಟ್ಟದ ಪಕ್ಕದಲ್ಲಿ ಇರುವ ಬ್ರಹ್ಮ ಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಬಂದಿದ್ದ ಯುವಕನೊಬ್ಬ ಬೆಟ್ಟದ ಮೇಲಿಂದ ಜಾರಿ ಕೆಳಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದವನನ್ನು ವಾಯುಪಡೆಯ ಹೆಲಿಕ್ಯಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದೆ.

ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ದುರ್ಗಮ ಪದೇಶಕ್ಕೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ ಯುವಕ ನಿಶಾಂತ (19) ನನ್ನು ಸಕಾಲಿಕ ಕಾರ್ಯಾಚರಣೆ ನಡೆಸಿದ ವಾಯುಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಬಳಿಕ ಯುವಕನನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ದೆಹಲಿ ಮೂಲದ ಯುವಕ ನಿಶಾಂಕ ಕೌಲ್ ಎಂಬವ ಗೆಳೆಯರೊಂದಿಗೆ ಬ್ರಹ್ಮ ಗಿರಿ ಟ್ರೆಕ್ಕಿಂಗ್ ಮಾಡಲು ಬಂದಿದ್ದ. ಯುವಕ ಬೆಟ್ಟದ ಕಡಿದಾದ ಭಾಗದಲ್ಲಿ ನಿಂತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಪ್ರಪಾತದ ಕೊರಕಲಿನ ನಡುವೆ ಸಿಲುಕಿದ್ದ ಯುವಕನನ್ನು ಮೇಲೆತ್ತಲು ಸ್ಥಳೀಯರು ಹಾಗೂ ಸ್ನೇಹಿತರು ಹರಸಾಹಸಪಟ್ಟರು.

ಬ್ರಹ್ಮ ಗಿರಿ ಪರ್ವತದ ಕಡಿದಾದ ಪ್ರದೇಶದಲ್ಲಿ ಟ್ರೆಕ್ಕಿಂಗ್ ವೇಳೆ ಸೆಲ್ಫಿ ತೆಗೆಯಲು ಮುಂದಾದ ಯುವಕ ನಿಶಾಂಕ ಕೌಲ್ ಎಂಬ ಯುವಕ ಕೆಳಗೆ ಬಿದ್ದಿದ್ದಾನೆ. ಬೆಟ್ಟದ ಮೇಲಿನಿಂದ ಸುಮಾರು 300 ಅಡಿ ಕೆಳಗೆ ಪ್ರಪಾತಕ್ಕೆ ಈ ಯುವಕ ಬಿದ್ದಿದ್ದ.

ನಿಶಾಂತ ನನ್ನು ಅಗ್ನಿಶಾಮಕ, ಎಸ್‍ಡಿಆರ್ ಎಫ್, ಎನ್‍ಡಿಆರ್ ಎಫ್ ಮತ್ತು ಜಿಲ್ಲಾಡಳಿತವು ಸಮನ್ವಯದಿಂದ ಜಂಟಿ ಕಾರ್ಯಚರಣೆ ನಡೆಸಿ ವಾಯುಸೇನೆ ಸಹಕಾರದಿಂದ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನ ಮಾಡಿದ್ದರು.

ಸಹಾಯದ ಕರೆಗೆ ತಕ್ಷಣ ಸ್ಪಂದಿಸಿದ ಸ್ಥಳೀಯ ಪೊಲೀಸರು ಹಾಗೂ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ಪ್ಯಾರಾಶೂಟ್ ಮೂಲಕ ಯುವಕನನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.  ಕೆಳಗೆ ಬಿದ್ದು ಕಡಿದಾದ ಬಂಡೆಯೊಂದರಲ್ಲಿ ಆತ ಸಿಲುಕಿಕೊಂಡಿದ್ದ ಎನ್ನಲಾಗಿದೆ.

You might also like
Leave a comment