This is the title of the web page

ಸೇನಾ ನೇಮಕಾತಿ ವಿರುದ್ಧ ಪ್ರತಿಭಟನೆ ಕಿಚ್ಚು : ಬಿಜೆಪಿ ಅಧ್ಯಕ್ಷನ ಮನೆ ಧ್ವಂಸ

ಪಾಟ್ನಾ, ೧೭- ಬಿಜೆಪಿ ಅಧ್ಯಕ್ಷ ಸಂಜಯ ಜೈಸ್ವಾಲ್ ಅವರ ಬೆಟ್ಟಿಯಾ ಪಟ್ಟಣದಲ್ಲಿರುವ ನಿವಾಸವನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಯ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದು ಬಿಹಾರದಲ್ಲಿ ನಡೆದ ರಾಜಕೀಯ ನಾಯಕರು ಮನೆಗಳ ಮೇಲಿನ ಎರಡನೇ ಘಟನೆಯಾಗಿದೆ.

ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸದ ಮೇಲೆ ಉದ್ರಿಕ್ತರ ಗುಂಪೊಂದು ಮುಂಜಾನೆ ದಾಳಿ ನಡೆಸಿತ್ತು. ಈಗ ಬಿಜೆಪಿಯ ಹಿರಿಯ ನಾಯಕ ಮನೆ ಮೇಲೆ ಮಾಡಿದೆ.
ಈ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜೈಸ್ವಾಲ, ದಾಳಿಕಾರರು ಸೇನಾ ಆಕಾಂಕ್ಷಿಗಳಲ್ಲ ಮತ್ತು ಅವರು ಕಟ್ಟಡವನ್ನು ಸ್ಫೋಟಿಸುವ ಉದ್ದೇಶದಿಂದ ಬಂದಿದ್ದರು ಎಂದು ಹೇಳಿದ್ದಾರೆ.

ನನ್ನ ಮನೆಯ ಮೇಲೆ ದಾಳಿ ಮಾಡಲಾಗಿದೆ. ಕಲ್ಲು ತೂರಾಟ ನಡೆಸಲಾಗಿದೆ. ಡೀಸೆಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ಸಹ ಮಾಡಲಾಗಿದ್ದು, ಸಿಲಿಂಡರ್ ಬಾಂಬ್ ಅನ್ನು ಗುಂಪು ಬಿಟ್ಟು ಹೋಗಿದೆ. ಇದು ಕಟ್ಟಡವನ್ನು ಸ್ಫೋಟಿಸುವ ಉದ್ದೇಶವಿತ್ತು ಎಂದು ಅವರು ಹೇಳಿದರು.

ಬೆಟ್ಟಿಯಾ ಪಟ್ಟಣದಲ್ಲಿರುವ ರೇಣುದೇವಿ ಅವರು ಮಾತನಾಡಿ, ಪಾಟ್ನಾದಲ್ಲಿದ್ದಾಗ ಗುಂಪೊಂದು ಧ್ವಂಸ ಕಾರ್ಯ ನಡೆಸಿದ್ದಾರೆ. ಇಲ್ಲಿ ಪ್ರತಿಪಕ್ಷದ ಗೂಂಡಾಗಳ ಕೈವಾಡವಾಗಿದೆ. ನೊಂದ ವಿದ್ಯಾರ್ಥಿಗಳು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಳ್ಳುವುದಿಲ್ಲವೆಂದು ರೇಣುದೇವಿ ತಿಳಿಸಿದ್ದಾರೆ.

You might also like
Leave a comment