Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಿವೃತ್ತ ಸೈನಿಕನಿಗೆ 11.90 ಲಕ್ಷ ರೂ. ಪಂಗನಾಮ


ಹುಬ್ಬಳ್ಳಿ : ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಎಂಬುವವರೇ ವಂಚನೆಗೊಳಗಾದ ನಿವೃತ್ತ ಸೈನಿಕ.

ವಿರೂಪಾಕ್ಷಪ್ಪ ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾಗ, ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆಯ ಈರಪ್ಪ ಬೂದಿಹಾಳ ಎಂಬುವವರು ಪರಿಚಯವಾಗಿದ್ದರು. ಇವರಿಬ್ಬರು ಸೇರಿ ವಿರೂಪಾಕ್ಷಪ್ಪ ಅವರಿಗೆ ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿದ್ದರು ಎನ್ನಲಾಗುತ್ತಿದೆ.

ಇವರನ್ನು ನಂಬಿದ ವಿರೂಪಾಕ್ಷಪ್ಪ ಇಬ್ಬರಿಗೆ 11.90 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಈ ಇಬ್ಬರು ಉದ್ಯೋಗ ನೀಡದೆ 85 ಸಾವಿರ ಮರಳಿಸಿದ್ದು, ಉಳಿದ ಹಣ ನೀಡದೇ ವಂಚನೆ ಮಾಡಿದ್ದಾರೆ ಎಂದು ವಿರೂಪಾಕ್ಷಪ್ಪ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


A B Dharwadkar
the authorA B Dharwadkar

Leave a Reply