This is the title of the web page

ಕತಾರ್ ದೇಶದಲ್ಲೂ ಜೇಮ್ಸ ವೀಕ್ಷಿಸಲು ಜನಸಂಭ್ರಮ

ದೋಹಾ (ಕತಾರ್), 20 – ಖ್ಯಾತ ನಟ ಪುನೀತ ರಾಜಕುಮಾರ ಅವರ ಅಂತಿಮ ಚಲನಚಿತ್ರ ’ಜೇಮ್ಸ್’ ವಿಶೇಷ ಪ್ರದರ್ಶನವನ್ನು ಕರ್ನಾಟಕ ಸಂಘ, ಕತಾರ್ ವತಿಯಿಂದ ದಿ ೧೮, ಶುಕ್ರವಾರದಂದು ಮಧ್ಯಾಹ್ನ ೪ ಗಂಟೆಗೆ ಏಷಿಯನ್ ಟೌನ್ ಸಿನಿಮಾದ ೪ನೇ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪುನೀತ ಅಭಿಮಾನಿಗಳು ಚಿತ್ರ ನೋಡಲು ಮುಗಿಬಿದ್ದರು.

ಇದೇ ಕರ್ನಾಟಕ ಸಂಘ, ಕತಾರ್ ೨೦೧೯ ನವಂಬರ್ ತಿಂಗಳಿನಲ್ಲಿ ಆಯೋಜಿಸಿದ್ದ ’ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮಕ್ಕೆ ಪುನೀತ ರಾಜಕುಮಾರ ದಂಪತಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದರು. ದುರದೃಷ್ಟವಷಾತ್ ಇದು ಪುನೀತ ರಾಜಕುಮಾರ ಅವರ ಕೊನೆಯ ಅಧಿಕೃತ ವಿದೇಶಿ ಭೇಟಿಯಾಗಿತ್ತು ಎನ್ನಲಾಗಿದೆ.

ಕತಾರಿನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ನೆಚ್ಚಿನ ನಟ, ಯುವರತ್ನ, ಕರ್ನಾಟಕ ರತ್ನರನ್ನು ಗೌರವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ’ಜೇಮ್ಸ್’ ಚಲನಚಿತ್ರವನ್ನು ವೀಕ್ಷಿಸಿ ಪ್ರಶಂಸೆ, ಗೌರವಗಳನ್ನು ವ್ಯಕ್ತಪಡಿಸಿದರು.

’ಜೇಮ್ಸ್’ ಚಿತ್ರವು ಎಲ್ಲೆಡೆ ತೆರೆಕಂಡಂತೆ, ಕತಾರಿನಲ್ಲಿ ೧೭ನೇ ತಾರೀಖು, ಅಂದರೆ ಪುನೀತ ರಾಜಕುಮಾರ ಅವರ ಜನ್ಮದಿನದಂದು ತೆರೆಕಂಡಿತ್ತು. ಮೊದಲನೇ ದಿನ ಬಂದು ವೀಕ್ಷಿಸಿದವರಲ್ಲಿ ಕೆಲವರು ಮರುದಿನವೂ ಬಂದು ತಮ್ಮ ಅಭಿಮಾನವನ್ನು ಮೆರೆದರು.

ಚಲನಚಿತ್ರ ಪ್ರದರ್ಶನದ ಮೊದಲು ಸಂಚಾಲಕರು ಹಾಗು ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರು ನೆರೆದ ಕನ್ನಡ ಅಭಿಮಾನಿಗಳನ್ನುದೇಶಿಸಿ ಮಾತನಾಡಿದರು. ತಮ್ಮ ಆತ್ಮೀಯ ಸ್ನೇಹಿತರೂ ಆಗಿದ್ದ ಪುನೀತ ರಾಜಕುಮಾರ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದರು.

IMG_8743

ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ನ ಮಾಜಿ ಉಪಾಧ್ಯಕ್ಷರ ಮಹೇಶ ಗೌಡರ ಮತ್ತು ಕರ್ನಾಟಕ ಸಂಘದ ಪ್ರಸ್ತುತ ಮಹಿಳಾ ಕಾರ್ಯದರ್ಶಿಯಾಗಿರುವ ಶ್ರೀಮತಿ ಸುಶೀಲ ಸುನೀಲ ಅವರು ಪುನೀತ ರಾಜಕುಮಾರ ಅವರ ಗುಣಗಾನ ಮಾಡಿದರು.

You might also like
Leave a comment