ಲಂಡನ್, ೮- ಬ್ರಿಟನ್ ರಾಣಿ ಎಲಿಜಬೆತ್ 2 ನಿಧನರಾಗಿದ್ದಾರೆ. ಬ್ರಿಟನ್ನ ದೀರ್ಘಾವಧಿಯ ರಾಣಿ ಎಂದೇ ಖ್ಯಾತಿ ಪಡೆದಿದ್ದ ಎಲಿಜಬೆಲ್ ಅವರು ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.
ವೈದ್ಯರು ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯದ ಕುರಿತು ಚಿಂತಿತರಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ಹೊರಬಿದ್ದಿತ್ತು. ಅವರ ಆರೋಗ್ಯದ ಕಾರಣಗಳಿಂದ ಪ್ರಮುಖ ಸಭೆಗಳನ್ನು ಸಹ ಬ್ರಿಟನ್ ರಾಣಿ ಎಲಿಜಬೆತ್ II ಮುಂದೂಡಿದ್ದರು. ಆದರೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಅರಮನೆ ಪ್ರಕಟಿಸಿದೆ.