Please assign a menu to the primary menu location under menu

Local News

ಗಣೇಶ ಉತ್ಸವದಲ್ಲಿ ಸ್ಥಳೀಯ ಮಹಾಪುರುಷರನ್ನು ಸ್ಮರಿಸಿ : ರಾಜೀವ ಟೋಪಣ್ಣವರ 

toppannavar

ಬೆಳಗಾವಿ : ದೇಶದ ಸ್ವಾತಂತ್ಯಕ್ಕಾಗಿ ಜನಜಾಗೃತಿ ಮೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶ ಉತ್ಸವ ಈಗ ರಾಷ್ಟ್ರೀಯ ಉತ್ಸವವಾಗಿದ್ದು, ಈ ಉತ್ಸವದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ಥಳೀಯ ಮಹಾಪುರುಷರನ್ನು ಸ್ಮರಿಸುವಂತೆ ಆಮ್ ಆದ್ಮಿ ಪಾರ್ಟಿಯ ಬೆಳಗಾವಿ ವಲಯ ಸಂಚಾಲಕ ರಾಜೀವ ಟೋಪಣ್ಣವರ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಗಣೇಶ ಉತ್ಸವದ ಮಂಟಪಗಳಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಹಾಕುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರು ಚನ್ನಮ್ಮಾ,  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದವರ ಪೋಟೋ ಹಾಕುವದರ ಮೂಲಕ ನಾಡಿನ ಇತಿಹಾಸ ಪುರುಷರನ್ನು ಸ್ಮರಿಸುವದು ನಾಡಿನ ಜನರ ಕರ್ತವ್ಯವಾಗಿದ್ದು ಈ ವಿಚಾರದಲ್ಲಿ ರಾಜಕಾರಣ ಮಾಡುವದು ಸರಿಯಲ್ಲ ಎಂದು ರಾಜೀವ ಟೋಪಣ್ಣವರ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷವು ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಗಣೇಶ ಉತ್ಸವ ಮಂಡಳಗಳಿಗೆ, ವೀರರಾಣಿ ಕಿತ್ತೂರು ಚನ್ನಮ್ಮಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗು ಸಾರ್ವಜನಿಕ ಗಣೇಶ ಉತ್ಸವದ ಹರಿಕಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಗಳನ್ನು ಹಂಚುವ ಮೂಲಕ ಜಿಲ್ಲೆಯ ಯುವಕರಲ್ಲಿ ಸ್ಥಳೀಯ ಮಹಾಪುರುಷರನ್ನು ಸ್ಮರಿಸಲಿದೆ ಎಂದು ರಾಜೀವ ಟೋಪಣ್ಣವರ ಹೇಳಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಚಿರತೆ ಕಳೆದ ಇಪ್ಪತ್ತು ದಿನಗಳಿಂದ ರಸ್ತೆ ಮೇಲೆ ಓಡಾಡಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಆದರೆ ಕಾಟಾಚಾರದ ಚಿರತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜೀವ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ಅರಣ್ಯ ಸಚಿವರನ್ನು ಭೇಟಿಯಾಗಲು ಬಂದಿರಬಹುದು, ಅದರಲ್ಲಿ ತಪ್ಪೇನಿದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಅವರು ಉಡಾಫೆಯ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಚಿರತೆ ನುಗ್ಗಿ ನಗರದ ಜನತೆ ಭಯಭೀತರಾಗಿದ್ದು, ಚಿರತೆ ಹಿಡಿದು ಅದನ್ನು ಕಾಡಿಗೆ ಸ್ಥಳಾಂತರ ಮಾಡುವ ವಿಚಾರವನ್ನು ಲೇವಡಿ ಮಾಡುವ ಮೂಲಕ ಸಚಿವ ಉಮೇಶ ಕತ್ತಿ ಅವರು ಬೆಳಗಾವಿ ಜನತೆಯ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೋಪಣ್ಣವರ ಕಿಡಿಕಾರಿದ್ದಾರೆ.

ಉಮೇಶ ಕತ್ತಿ ಅವರು ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವದು ಬಹಿರಂಗ ಸತ್ಯವಾಗಿದ್ದು, ಅವರ ಹೊಂದಾಣಿಕೆ ರಾಜಕಾರಣಕ್ಕೆ ಕ್ಷೇತ್ರದ ಜನ ಮರುಳಾಗಬಾರದು. ಉಮೇಶ ಕತ್ತಿ ಅವರು ಗಂಭೀರವಾಗಿರುವ ವಿಚಾರಗಳನ್ನು ಲೇವಡಿ ಮಾಡುತ್ತಾರೆ ಎಂದು ಟೋಪಣ್ಣವರ ವಾಗ್ದಾಳಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯ ವಿಧಾನ ಸರಿ ಇಲ್ಲ. ಕಬ್ಬಿನ ತೋಟದಲ್ಲಿ ಮಂಗಗಳು ಹೊಕ್ಕಾಗ ಮಂಗಗಳನ್ನು ಓಡಿಸುವ ರೀತಿಯಲ್ಲಿ ಚಿರತೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು, ಚಿರತೆ ಹಿಡಿಯಲು ನುರಿತ ತಂಡವನ್ನು ಬೆಳಗಾವಿಗೆ ಕರೆಸುವಂತೆಯೂ ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ.


Samadarshi News

Leave a Reply