ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬೆಳಗಾವಿ ಸಮೀಪದ ರಕ್ಕಸಕೊಪ್ಪ ಜಲಾಶಯ ಭಾಗಶಃ ಭರ್ತಿಯಾಗಿದ್ದು, ಗರಿಷ್ಠ ಮಟ್ಟ ತಲುಪಲು ಕೇವಲ 4 ಅಡಿ ಬಾಕಿಯಿದೆ.
ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ರಕ್ಕಸಕೊಪ್ಪ 0.60 ಟಿಎಂಸಿ ಸಾಮರ್ಥ್ಯದ ಜಲಾಶಯವಾಗಿದೆ. ಒಟ್ಟು 2478 ಅಡಿ ಎತ್ತರ ಹೊಂದಿದ್ದು ಇನ್ನು ನಾಲ್ಕು ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ.