This is the title of the web page

ಅಪರೂಪದ ಮೀನು 1.80 ಲಕ್ಷ ರೂ.ಗೆ ಮಾರಾಟ

ಉಡುಪಿ, 24- ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಒಂದೇ ಮೀನಿನಲ್ಲಿ ಬಂಪರ್‌ ಲಾಭ ಪಡೆದಿದ್ದಾರೆ. ಹಿಡಿದು ತಂದ ಅಪರೂಪದ ಗೋಳಿ ಮೀನು ಬರೋಬ್ಬರಿ ದಾಖಲೆಯ 1.80 ಲಕ್ಷ ರೂ.ಗಳಿಗೆ ಮಾರಾಟವಾಗಿದೆ.

ಉಡುಪಿ ಜಿಲ್ಲೆಯ ಮಲ್ಪೆಯ ತೊಟ್ಟಂನ ಶಾನ್‌ ರಾಜ‌ ಎಂಬವರಿಗೆ ಸೇರಿದ ಬಲರಾಮ‌ ಬೋಟಿನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆಗ ಅವರಿಗೆ ಅಪರೂಪ ಮೀನು ದೊರೆತಿತ್ತು. ಅದನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಅದು 1.80 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಇದಕ್ಕೆ ಫೋಲ್ ಫಿಶ್ ಎಂದೂ ಕರೆಯುತ್ತಾರೆ.

20 ಕೆಜಿ ತೂಕವಿದ್ದ ಗೋಳಿ ಮೀನು ಪ್ರತಿ ಕೆಜಿಗೆ 9060 ರೂ. ಗಳಂತೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಹರಾಜಾಗುತ್ತಿವೆ. ಆದರೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಂದು ಮೀನು ಹರಾಜು ಆಗಿರೋದು ಇದೇ ಮೊದಲು ಎನ್ನುತ್ತಾರೆ ಮೀನುಗಾರರು.

ಗೋಳಿ ಜಾತಿಯ ಮೀನು ಅಪರೂಪದ ತಳಿ ಇದನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಸುತ್ತಾರೆ. ಮಧುಮೇಹ, ಅಸ್ತಮಾ ಕಾಯಿಲೆಗಳಿಗೆ ಹೆಚ್ಚು ಬಳಕೆಯಾಗುತ್ತದೆ. ಹೀಗಾಗಿಯೇ ಈ ಮೀನಿಗೆ ಮಾರುಕಟ್ಟೆಯಲ್ಲಿ ಅಷ್ಟು ಬೆಲೆ ಬಂದಿದೆ ಎಂದು ಮೀನುಗಾರರು ಹೇಳುತ್ತಾರೆ.

You might also like
Leave a comment