Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಪಡಿತರ ಚೀಟಿ ಹಿಂಭಾಗ ಏಸು ಫೋಟೋ


ರಾಮನಗರ: ಪಡಿತರ ಚೀಟಿಯ ಹಿಂಭಾಗ ಏಸು ಭಾವಚಿತ್ರ ಹಾಕಿರುವ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಪಡಿತರ ಚೀಟಿ ಹಿಂದೆ ಏಸು ಕ್ರಿಸ್ತನ ಫೋಟೋ ಇದೆ ಎನ್ನಲಾಗಿದೆ.

ಈ ಭಾಗದ ಬಹುತೇಕರಿಗೆ ಇದೇ ರೀತಿಯ ಕಾರ್ಡ ನೀಡಲಾಗಿದೆಯಂತೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ವಿಚಾರವಾಗಿ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಈ ಸಂಬಂಧ ಶ್ರೀರಾಮಸೇನೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದು, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಮಾತಾಡಿರುವ ಫುಡ್ ಡಿಡಿ, ನಮ್ಮ ಇಲಾಖೆಯಿಂದ ಈ ರೀತಿಯ ಯಾವುದೇ ಕಾರ್ಡ‌ಗಳನ್ನು ವಿತರಣೆ ಮಾಡಿಲ್ಲ. ಕಾರ್ಡ ಲ್ಯಾಮಿನೇಷನ್ ಮತ್ತು ಕವರ್ ಹಾಕಿಸಿಕೊಳ್ಳುವ ವೇಳೆ ಈ ರೀತಿ ಆಗಿರಬಹುದು. ಇದಕ್ಕೂ ಇಲಾಖೆಗೂ ಸಂಬಂಧವಿಲ್ಲ ಎಂದಿದ್ದಾರೆ. ಹಾಗೆಯೇ ಇದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.


Leave a Reply